2024 ಚುನಾವಣೆ : ನಡ್ಡಾ ರಾಷ್ಟ್ರೀಯ ವಿಸೃತ್ ಪ್ರವಾಸ

ಹೊಸದಿಲ್ಲಿ : ಇತ್ತೀಚೆಗಷ್ಟೇ ಹಲವು ರಾಜ್ಯಗಳಲ್ಲಿ ನಡೆದ ಉಪಚುನಾವಣೆ ಹಾಗೂ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ . ಈಬೆನ್ನಲ್ಲೆ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, 2024ರ ಸಾರ್ವತ್ರಿಕ ಚುನಾವಣೆಗೆ ಸಿದ್ಧತೆ ನಡೆಸಲು, ಪಕ್ಷ ಸಂಘಟಿಸಲು ದೇಶಾದ್ಯಂತ ಪ್ರವಾಸ ಕೈಗೊಳ್ಳಲು ಸಜ್ಜಾಗಿದ್ದಾರೆ.
100 ದಿನಗಳ ರಾಷ್ಟ್ರೀಯ ವಿಸೃತ್ ಪ್ರವಾಸವನ್ನು ನಡ್ಡಾ, ಶೀಘ್ರದಲ್ಲೇ ಕೈಗೊಳ್ಳಲಿದ್ದು, 2024ರ ಚುನಾವಣೆಗೆ ಯಾವೆಲ್ಲ ಸಿದ್ಧತೆಗಳನ್ನು ನಡೆಸಿಕೊಳ್ಳಬೇಕು ಎಂಬುದರ ಬಗ್ಗೆ, ಪಕ್ಷ ಸಂಘಟನೆಯ ಬಗ್ಗೆ ಚರ್ಚೆಗಳನ್ನು ನಡೆಸಲಿದ್ದಾರೆ. ಯಾವ ರಾಜ್ಯಗಳಲ್ಲಿ ಎಷ್ಟು ದಿನ ಉಳಿದುಕೊಳ್ಳಬೇಕು ಎಂಬುದನ್ನು ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
2019ರ ಚುನಾವಣೆಯಲ್ಲಿ ಪಕ್ಷ ಯಾವ ಕ್ಷೇತ್ರಗಳಲ್ಲಿ ಗೆಲುವು ಸಾಸಲು ಸಾಧ್ಯವಾಗಿಲ್ಲವೋ ಅಂತಹ ಕ್ಷೇತ್ರಗಳ ಬಗ್ಗೆ ಹೆಚ್ಚಿನ ಗಮನಹರಿಸುವುದು ಹಾಗೂ ಚುನಾವಣಾ ಕಾರ್ಯತಂತ್ರ ರೂಪಿಸುವುದು ಕೂಡ ಈ ಪ್ರವಾಸದ ಪ್ರಮುಖ ನಿರ್ಣಾಯಕ ಅಂಶಗಳಲ್ಲಿ ಒಂದಾಗಿದೆ.
ಇದಲ್ಲದೆ, ಪಕ್ಷದ ಸಾರ್ವಜನಿಕ ಪ್ರತಿನಿಗಳ ಭೇಟಿ, ಹೊಸ ಸಂಭಾವ್ಯ ಒಕ್ಕೂಟಗಳ ಬಗ್ಗೆ ಚರ್ಚಿಸುವುದು, ರಾಜ್ಯ ಸರ್ಕಾರದ ಆಡಳಿತ ಪರಿಶೀಲನೆ, ಕಾರ್ಯವೈಖರಿ ಸುಧಾರಣೆ, ವಿವಿಧ ಪ್ರಭಾವಿ ಗುಂಪುಗಳೊಂದಿಗೆ ಸಂವಹನ ನಡೆಸುವುದು. ಪಕ್ಷದ ಹಿರಿಯ ಕಾರ್ಯಕರ್ತರೊಂದಿಗೆ ಸಂವಹನ ಮತ್ತು ಕಾರ್ಯಕರ್ತರಿಗೆ ಪಕ್ಷ ಸಿದ್ದಾಂತದ ಬಗ್ಗೆ ಸ್ಪಷ್ಟತೆ ನೀಡುವುದು ನಡ್ಡಾರ ಕಾರ್ಯಾಚರಣೆಗಳ ಭಾಗವಾಗಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ