ಪದೇಪದೆ ಬೇರೆ ರಾಷ್ಟ್ರಗಳತ್ತ ಬೆರಳು ತೋರಿಸುತ್ತಿರುವ ಚೀನಾ ಕೊರೋನಾ ಮೂಲ ಆಸ್ಟ್ರೇಲಿಯಾವಂತೆ !ಪದೇಪದೆ ಬೇರೆ ರಾಷ್ಟ್ರಗಳತ್ತ ಬೆರಳು ತೋರಿಸುತ್ತಿರುವ ಚೀನಾ ಕೊರೋನಾ ಮೂಲ ಆಸ್ಟ್ರೇಲಿಯಾವಂತೆ !

ಹೊಸದಿಲ್ಲಿ: ಇಡೀ ಜಗತ್ತನ್ನೇ ಸಂಕಷ್ಟಕ್ಕೆ ದೂಡಿದ ಕೊರೋನಾದ ಮೂಲ ತನ್ನದೇ ನೆಲವಾಗಿದ್ದರೂ, ಅಮೆರಿಕ ಮತ್ತು ಭಾರತದಿಂದಲೇ ಸಾಂಕ್ರಾಮಿಕ ಜನ್ಮ ಪಡೆದಿತೆಂದು ಇತ್ತೀಚೆಗಷ್ಟೇ ಆರೋಪಿಸಿದ್ದ ಚೀನಾ, ಇದೀಗ ರೋಗ ಹರಡಿರುವುದು ಆಸ್ಟ್ರೇಲಿಯಾದಿಂದ ಎಂದು ತನ್ನ ವರಸೆ ಬದಲಿಸಿದೆ.
ಕಳೆದ ಕೆಲ ತಿಂಗಳುಗಳಿಂದ ಸಂಸ್ಕರಿತ ಮಾಂಸ ಉತ್ಪನ್ನಗಳ ಪರೀಕ್ಷೆ ನಡೆಸುತ್ತಿರುವ ಚೀನಾ, ಕೊರೋನಾ ಒಳಗೊಂಡ ಮಾಂಸವನ್ನು ರವಾನಿಸುತ್ತಿರುವುದಾಗಿ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದಂತಹ ರಾಷ್ಟ್ರಗಳತ್ತ ಬೆರಳು ಮಾಡಿ ತೋರಿಸುತ್ತಿದೆ. ಈ ನಡುವೆ ವೈರಸ್ ಭಾರತದಿಂದ ಜನ್ಮಪಡೆದಿರುವುದಾಗಿ ಆರೋಪಿಸಿದೆಯಾದರೂ ಅದನ್ನು ಸಾಬೀತು ಪಡಿಸುವಲ್ಲಿ ವಿಫಲವಾಗಿದೆ.
ಹುವಾನ್‍ನಲ್ಲಿನ ಮಾರುಕಟ್ಟೆಗಳಿಗೆ ಆಸ್ಟ್ರೇಲಿಯಾದಿಂದ ಕೊರೋನಾ ಆಮದಾಗಿದೆ ಎಂಬ ಆರೋಪವನ್ನು ತಿರಸ್ಕರಿಸಲಾಗದು ಎಂದು ಚೀನಾ ಮುಖವಾಣಿಯಾದ ಗ್ಲೋಬಲ್ ಟೈಮ್ಸ್‍ನ ಹೊಸ ತನಿಖಾ ವರದಿಯು ಆರೋಪಿಸಿದೆ. ಆ ಮೂಲಕ ಸಂಸ್ಕರಿತ ಆಹಾರದಿಂದ ಇತರ ದೇಶಗಳು ಸೋಂಕು ಹರಡುತ್ತಿವೆ ಎಂಬ ಚೀನಾದ ಇತ್ತೀಚಿನ ಆರೋಪವನ್ನು ಗ್ಲೋಬಲ್ ಟೈಮ್ಸ್ ಸಮರ್ಥಿಸಿಕೊಂಡಿದೆ.
ಇದೇ ವೇಳೆ ಚೀನಾದ ಈ ಆರೋಪಗಳು ಖಚಿತವಾಗಲು ಇನ್ನಷ್ಟು ಪುರಾವೆಗಳು ಅಗತ್ಯ ಎಂದೂ ವರದಿ ತಿಳಿಸಿದೆ. ಚೀನಾದ ಆರೋಪವು ಯಾವುದೇ ವೈಜ್ಞಾನಿಕ ಆಧಾರವನ್ನು ಒಳಗೊಂಡಿಲ್ಲ ಎಂದು ಸಹ ವರದಿ ಹೇಳಿದೆ.
ವಿಲಕ್ಷಣ ಪ್ರಾಣಿ ಮಾಂಸವನ್ನು ಮುಕ್ತವಾಗಿ ಮಾರಾಟ ಮಾಡುವ ವುಹಾನ್‍ನ ಮಾರುಕಟ್ಟೆಯಲ್ಲಿ ವೈರಸ್ ಆರಂಭವಾಯಿತೆಂಬ ಸತ್ಯ ಇನ್ನೂ ಹಾಗೆ ಉಳಿದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ