ಬಂಧನ, ಸೆರೆಗೆ ಚೀನಾದಿಂದ ಆಧುನಿಕ ತಂತ್ರಜ್ಞಾನ ಬಳಕೆ ಕ್ಸಿನ್‍ಜಿಯಾಂಗ್‍ನಲ್ಲಿ ಬಂತ ಉಯಿಘರ್ ಮುಸ್ಲಿಂರ ಪಟ್ಟಿ ಸೋರಿಕೆ

ಬೀಜಿಂಗ್: ಮುಸ್ಲಿಂರನ್ನು ಕ್ರೂರವಾಗಿ ಮತ್ತು ಗುಲಾಮರಂತೆ ಚೀನಾ ನಡೆಸಿಕೊಳ್ಳುತ್ತದೆ ಎಂಬ ಮಾತು ವಿಶ್ವವ್ಯಾಪಕವಾಗಿರುವ ನಡುವೆ, ಚೀನಾ ಸರ್ಕಾರ ತಯಾರಿಸಿರುವ ಕ್ಸಿನ್‍ಜಿಯಾಂಗ್ ಪ್ರಾಂತ್ಯದಲ್ಲಿ ಬಂತ ಉಯಿಘರ್ ಮುಸ್ಲಿಂರ ಪಟ್ಟಿ ಸೋರಿಕೆಯಾಗಿದೆ. ಇದರಲ್ಲಿ 2000ಕ್ಕೂ ಹೆಚ್ಚು ಬಂತ ಮುಸ್ಲಿಂರ ಮಾಹಿತಿ ಇದೆ.
ನ್ಯೂಯಾರ್ಕ್ ಮೂಲದ ಹ್ಯೂಮನ್ ರೈಟ್ಸ್ ವಾಚ್ (ಎಚ್‍ಆರ್‍ಡಬ್ಲ್ಯೂ) ಸಂಸ್ಥೆ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕ್ಸಿನ್‍ಜಿಯಾಂಗ್ ಪ್ರದೇಶದಲ್ಲಿನ ಟರ್ಕಿ ಮುಸ್ಲಿಂರ ಬಂಧನದ ದೊಡ್ಡ ಮಾಹಿತಿ ಇದು ಎಂದು ಹೇಳಿದೆ.
ಆಧುನಿಕ ಕಂಪ್ಯೂಟರ್ ತಂತ್ರಜ್ಞಾನದಲ್ಲಿ ಈ ಪಟ್ಟಿ ತಯಾರಿಸಲಾಗಿದ್ದು, ಬಂಧನ ನಡೆಸಲು ಮತ್ತು ಬಂಧನಕ್ಕೆ ಒಳಗಾದವರನ್ನು ಎಲ್ಲೆಲ್ಲಿ ಸೆರೆಯಲ್ಲಿರಿಸುವುದರ ಮಾಹಿತಿ ಒಳಗೊಂಡಿದೆ. ಕಂಪ್ಯೂಟರ್‍ನಲ್ಲಿ ಪಟ್ಟಿಯ ಪೊಗ್ರಾಂಗೆ ಹೋಗಿ ಕ್ಲಿಕ್ ಮಾಡಿದರೆ ಸಾಕು. ಸಂಯೋಜಿತ ಜಂಟಿ ಕಾರ್ಯಾಚರಣೆ ಯೋಜನೆ(ಐಜೆಒಪಿ), ಮುಂದಿನ ಕ್ರಮಕ್ಕೆ ಅನುವಾಗುವುದು ಹೇಗೆ, ಡಾಟಾ ವಿಶ್ಲೇಷಣೆ ಮತ್ತು ಬಂಸಲಾಗುವ ಮುಸ್ಲಿಂರ ವಿವರಗಳು ಲಭ್ಯವಾಗುತ್ತವೆ. ಮುಸ್ಲಿಂರ ದಬ್ಬಾಳಿಕೆಗೆ ಚೀನಾ ತಂತ್ರಜ್ಞಾನ ಬಳಸುತ್ತಿರುವುದು ಸ್ಪಷ್ಟ. 

ಕಂಪ್ಯೂಟರ್‍ನಲ್ಲಿ ಐಜೆಒಪಿ ಯೋಜನೆ ಕ್ಲಿಕ್ ಮಾಡಿದರೆ ಸಾಕು, ಪ್ರಾಂತ್ಯದಲ್ಲಿ ಕುರಾನ್ ಅಧ್ಯಯನ ತೊಡಗಿರುವವರು, ಧಾರ್ಮಿಕ ಉಡುಪು ಧರಿಸುವವರು, ಅಂತಾರಾಷ್ಟ್ರೀಯ ಪ್ರವಾಸದಲ್ಲಿರುವವರು ಸೇರಿದಂತೆ ಮುಸ್ಲಿಂರನ್ನು ಅತ್ಯಂತ ದೂರದ ಪ್ರದೇಶಗಳಲ್ಲಿ ಸೆರೆಯಲ್ಲಿಡುವ ಮಾಹಿತಿ ದೊರೆಯುತ್ತದೆ.
ಚೀನಾವು ತಂತ್ರಜ್ಞಾನದ ಮೂಲಕ ಕ್ಸಿನ್‍ಜಿಯಾಂಗ್‍ನ ಟರ್ಕಿ ಮುಸ್ಲಿಂರನ್ನು ಎಷ್ಟು ಕ್ರೂರವಾಗಿ ದಮನಿಸುತ್ತದೆ ಎಂಬ ಚಿತ್ರಣವನ್ನು 2018ರಿಂದ ಸಂಗ್ರಹಿಸಲಾದ ಅಕ್ಸು ಪಟ್ಟಿಯು ನೀಡುತ್ತದೆ ಎಂದು ಎಚ್‍ಆರ್‍ಡಬ್ಲ್ಯೂನ ಹಿರಿಯ ಸಂಶೋಧಕಿ ಮಾಯಾ ವಾಂಗ್ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ