ಎರಡನೇ ಆವೃತ್ತಿಯ ಶ್ರೇಯಾಂಕದಲ್ಲಿ ಮಹಾರಾಷ್ಟ್ರಗೆ ಎರಡನೇ ಸ್ಥಾನ ನಾವೀನ್ಯ ಸೂಚ್ಯಂಕದಲ್ಲಿ ಕರ್ನಾಟಕವೇ ಮೊದಲು

ಹೊಸದಿಲ್ಲಿ: ದೇಶದ ನಾವೀನ್ಯ ಸೂಚ್ಯಂಕ ಶ್ರೇಯಾಂಕವನ್ನು ಬುಧವಾರ ನೀತಿ ಆಯೋಗ ಬಿಡುಗಡೆ ಮಾಡಿದ್ದು, ಕರ್ನಾಟಕ ಈ ಬಾರಿಯೂ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ.
ತಮಿಳುನಾಡನ್ನು ಹಿಂದಿಕ್ಕಿರುವ ಮಹಾರಾಷ್ಟ್ರಗೆ ಎರಡನೇ ಸ್ಥಾನ ಲಭಿಸಿದ್ದರೆ, ನಂತರದ ಸ್ಥಾನಗಳಲ್ಲಿ ತೆಲಂಗಾಣ, ಕೇರಳ, ಹರ್ಯಾಣ, ಆಂಧ್ರ ಪ್ರದೇಶ, ಗುಜರಾತ್, ಉತ್ತರ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳಿವೆ.
ಈ ವರ್ಷ ಇಡೀ ಜಗತ್ತು ಕೊರೋನಾ ಸಂಕಷ್ಟವನ್ನು ಎದುರಿಸಬೇಕಾಯಿತು. ಸಾಂಕ್ರಾಮಿಕದ ಪರಿಣಾಮ ನಾವೀನ್ಯತೆಯ ಮಹತ್ವದ ಮೇಲೂ ಗಮನಾರ್ಹವಾಗಿ ಪರಿಣಾಮ ಬೀರಿತು. ಆರ್ಥಿಕ ಬೆಳವಣಿಗೆ ಮತ್ತು ಉತ್ಪಾದನಾ ಹೆಚ್ಚಳದಲ್ಲಿ ಎಂದಿಗೂ ಪ್ರಮುಖ ಪಾತ್ರ ನಿರ್ವಹಿಸಿದ್ದ ನಾವೀನ್ಯತೆಯ ಮೇಲೆಯೂ ಸಾಂಕ್ರಾಮಿಕ ಪರಿಣಾಮವನ್ನು ಬೀರಿದೆ. ಈ ಹಿನ್ನೆಲೆಯಲ್ಲಿ ಅಟಲ್ ಇನ್ನೋವೇಷನ್ ಮಿಷನ್, ಸ್ಟಾರ್ಟ್‍ಅಪ್ ಇಂಡಿಯಾದಂತಹ ಉಪಕ್ರಮಗಳ ಮೂಲಕ ನಾವೀನ್ಯತೆಯ ಸಂಸ್ಕøತಿಯನ್ನು ಉತ್ತೇಜಿಸಲ ಕೇಂದ್ರ ಸರ್ಕಾರ ಗಮನ ನೀಡಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ತಿಳಿಸಿದ್ದಾರೆ.
ತಮ್ಮ ನಾವೀನ್ಯತೆಯ ಪರಿಸರ ಮತ್ತು ಅವುಗಳ ಬೆಳವಣಿಗೆಯ ಮೌಲ್ಯಮಾಪನ ನಡೆಸುವುದಕ್ಕೆ ರಾಜ್ಯಗಳಿಗೆ ನಾವೀನ್ಯತೆಯ ಸೂಚ್ಯಂಕದ ಎರಡನೇ ಆವೃತ್ತಿಯು ಅನುವು ನೀಡಲಿದೆ. ಮುಖ್ಯವಾಗಿ ನಾವೀನ್ಯತೆಯ ವಿಭಾಗವನ್ನು ಎರಡು ನಾವೀನ್ಯತೆ ಸಾಮಥ್ರ್ಯ(ಸಕ್ರಿಯ)ಗಳು ಮತ್ತು ನಾವೀನ್ಯತೆಯ ಫಲಿತಾಂಶ(ಪ್ರದರ್ಶನ) ಎಂಬ ಎರಡು ಆಯಾಮಗಳಾಗಿ ವಿಂಗಡಿಸಲಾಗಿದ್ದು, ಇವು ಹೆಚ್ಚಿನ ಗಮನ ಹರಿಸಬೇಕಾದ ಕ್ಷೇತ್ರಗಳನ್ನು ಗುರುತಿಸಲು ರಾಜ್ಯಗಳಿಗೆ ಉತ್ತಮ ದೃಷ್ಟಿಕೋನವಾಗಲಿವೆ ಎಂದು ಕುಮಾರ್ ಹೇಳಿದ್ದಾರೆ.
ಕೇಂದ್ರಾಡಳಿತ ಪ್ರದೇಶದಲ್ಲಿ ದಿಲ್ಲಿಗೆ ಅಗ್ರಸ್ಥಾನ
ಇನ್ನು ಕೇಂದ್ರಾಡಳಿತ ಪ್ರದೇಶಗಳು ಮತ್ತು ಈಶಾನ್ಯ ರಾಜ್ಯಗಳ ಪೈಕಿ ದಿಲ್ಲಿ ಹಾಗೂ ಹಿಮಾಚಲ ಪ್ರದೇಶಗಳಿಗೆ ಕ್ರಮವಾಗಿ ಅಗ್ರ ಶ್ರೇಯಾಂಕ ಪ್ರಾಪ್ತಿಯಾಗಿದೆ. ಇದಕ್ಕೂ ಮೊದಲು 2019ರ ಅಕ್ಟೋಬರ್‍ನಲ್ಲಿ ಭಾರತ ನಾವೀನ್ಯತೆ ಸೂಚ್ಯಂಕದ ಆವೃತ್ತಿಯು ಬಿಡುಗಡೆಗೊಂಡಿದ್ದು, ಮೊದಲ ಬಾರಿಗೆ ಭಾರತೀಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಾವೀನ್ಯತೆ ಸಾಮಥ್ರ್ಯವನ್ನು ಮೌಲ್ಯಮಾಪನ ಮಾಡಲಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ