ಜಾಕಿರ್ ನಾಯ್ಕ್ ಮತ್ತು ರೊಹಿಂಗ್ಯಾ ನಾಯಕರ ನಡುವೆ 2 ಲಕ್ಷ ಡಾಲರ್ ಹಣ ವರ್ಗಾವಣೆ ಮಹಿಳೆ ನೇತೃತ್ವದಲ್ಲಿ ದೇಶದಲ್ಲಿ ಉಗ್ರ ದಾಳಿಗೆ ಸಂಚು

ಹೊಸದಿಲ್ಲಿ: ಮಲೇಷ್ಯಾ ಮೂಲದ ರೊಹಿಂಗ್ಯಾ ಭಯೋತ್ಪಾದಕ ಸಂಘಟನೆ ಮಹಿಳೆಯ ನೇತೃತ್ವದ ಗುಂಪಿನ ಮೂಲಕ ದೇಶದಲ್ಲಿ ಭಯೋತ್ಪಾದಕ ದಾಳಿ ನಡೆಸುವ ಉದ್ದೇಶ ಹೊಂದಿತ್ತು ಎಂಬ ಆಘಾತಕಾರಿ ಸಂಗತಿಯನ್ನು ಭಾರತೀಯ ಗುಪ್ತಚರ ಸಂಸ್ಥೆ ಬಹಿರಂಗ ಪಡಿಸಿದೆ.
ಭಾರತದಲ್ಲಿ ಭಯೋತ್ಪಾದಕ ದಾಳಿ ನಡೆಸುವುದಕ್ಕಾಗಿಯೇ ಮಲೇಷ್ಯಾ ಮೂಲದ ರೊಹಿಂಗ್ಯಾ ಭಯೋತ್ಪಾದಕ ಸಂಘಟನೆ ಮತ್ತು ವಾಂಟೆಡ್ ವಿವಾದಾತ್ಮಕ ಇಸ್ಲಾಂ ಪ್ರಚಾರಕ ಜಾಕಿರ್ ನಾಯ್ಕ್ ನಡುವೆ ಹಣಕಾಸು ವರ್ಗಾವಣೆಗಳಾಗಿರುವುದು ಬೇಹುಗಾರಿಕಾ ಸಂಸ್ಥೆಯ ತನಿಖೆಯಿಂದ ಬಯಲಾಗಿದೆ.
ಪಿಎಫ್‍ಐ ಭಾಗಿ ಬಗ್ಗೆ ಶಂಕೆ
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‍ಐ)ಗೆ ಸೇರಿದ ಕೆಲ ಕಾರ್ಯಕರ್ತರು, ಈ ಭಯೋತ್ಪಾದಕ ಗುಂಪಿಗೆ ಬೆಂಬಲ ವ್ಯಕ್ತಪಡಿಸುವ ಬಗ್ಗೆ ಸಹ ಅನುಮಾನ ವ್ಯಕ್ತಪಡಿಸಿರುವ ಸಂಸ್ಥೆಯು ಈ ಸಂಘಟನೆಯೊಂದಿಗೆ ಸಂಪರ್ಕವನ್ನಿರಿಸಿಕೊಂಡಿರುವವರ ಮೇಲೆ ತೀವ್ರ ನಿಗಾ ಇರಿಸುವಂತೆ ಸೂ1ಚಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ