ಮಿಗ್-29ಕೆ ತರಬೇತಿ ವಿಮಾನ ಪತನ ಒಬ್ಬ ಪೈಲಟ್ ರಕ್ಷಣೆ, ಇನ್ನೊಬ್ಬರು ನಾಪತ್ತೆ

ಮುಂಬೈ: ಭಾರತೀಯ ನೌಕಾಪಡೆಗೆ ಸೇರಿದ ಮಿಗ್-29ಕೆ ತರಬೇತಿ ವಿಮಾನವೊಂದು ಅರಬ್ಬಿ ಸಮುದ್ರದಲ್ಲಿ ಗುರುವಾರ ಸಂಜೆ ಪತನಗೊಂಡಿದೆ ಎಂದು ಅಕಾರಿಗಳು ತಿಳಿಸಿದ್ದಾರೆ.
ದುರಂತದಲ್ಲಿ ಪೈಲಟ್ ಒಬ್ಬರನ್ನು ರಕ್ಷಿಸಲಾಗಿದ್ದು, ಇನ್ನೊಬ್ಬರಿಗಾಗಿ ವಾಯು ಮತ್ತು ಭೂಮಿ ಘಟಕಗಳು ಶೋಧ ಕಾರ್ಯಾಚರಣೆ ಕೈಗೊಂಡಿವೆ. ದುರಂತದ ಕುರಿತು ತನಿಖೆಗೆ ಆದೇಶಿಸಲಾಗಿದೆ. ಐಎನ್‍ಎಸ್ ವಿಕ್ರಮಾದಿತ್ಯ ವಿಮಾನವಾಹಕ ನೌಕೆಯ ಮೂಲಕ ಮಿಗ್-29ಕೆ ವಿಮಾನವನ್ನು ನಿರ್ವಹಿಸಲಾಗುತ್ತಿತ್ತು.
ಇತ್ತೀಚೆಗೆ ನಡೆದ ಮಿಗ್-29ಕೆ ತರಬೇತಿ ವಿಮಾನದ ನಾಲ್ಕನೆಯ ದುರಂತವಿದು. ಈ ವರ್ಷದ ಆರಂಭದಲ್ಲಿ ಗೋವಾದಲ್ಲಿ ತರಬೇತಿ ವೇಳೆ ಮಿಗ್-29ಕೆ ವಿಮಾನವೊಂದು ದುರಂತಕ್ಕೀಡಾಗಿತ್ತು. ಆ ವೇಳೆ ಪೈಲ್‍ಟ್ ಪಾರಾಗಿದ್ದರು. ಕಳೆದ ವರ್ಷ ನವೆಂಬರ್‍ನಲ್ಲೂ ಮಿಗ್29ಕೆ ವಿಮಾನವೊಂದು ಪಕ್ಷಿ ಬಡಿದ ನಂತರ ಪತನಗೊಂಡಿತ್ತು. ಈ ವೇಳೆ ಇಬ್ಬರು ಪೈಲ್‍ಟ್‍ಗಳು ಪಾರಾಗಿದ್ದರು. 2018ರ ಜನವರಿಯಲ್ಲಿ ಇನ್ನೊಂದು ಮಿಗ್-29ಕೆ ಪತನಗೊಂಡಿತ್ತು. ಈ ವೇಳೆ ಪೈಲ್‍ಟ್ ರಕ್ಷಿಸಲ್ಪಟ್ಟಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ