ಕುತುಬ್ ಮಿನಾರ್ ಕೆಳಗಿರುವ ಮಂದಿರ ಪುನಃ ಸಾಪಿಸಲು ಅರ್ಜಿ

ಹೊಸದಿಲ್ಲಿ:  ಕುತುಬ್ ಮಿನಾರ್ ಕೆಳಗೆ ಹಿಂದೂ, ಜೈನ ದೇವಾಲಯಗಳಿದ್ದು, ಅವುಗಳನ್ನು ಪುನಃ ಸ್ಥಾಪಿಸುವ ಹಾಗೂ ಅಲ್ಲಿ ಪ್ರಾರ್ಥನೆ ಸಲ್ಲಿಸುವ ಹಕ್ಕನ್ನು ಒದಗಿಸಬೇಕೆಂದು ಕೋರಿ ದಿಲ್ಲಿ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ.
ಸದ್ಯ ಕುತುಬ್ ಮಿನಾರ್ ಇರುವ ಜಾಗದಲ್ಲಿ ಈ ಹಿಂದೆ ಸುಮಾರು 27 ಹಿಂದೂ ಹಾಗೂ ಜೈನ ದೇಗುಲಗಳಿದ್ದು, ಇವುಗಳನ್ನು ಧ್ವಂಸಗೊಳಿಸಿ ಕುತುಬ್ ಮಿನಾರ್ ಆವರಣದಲ್ಲಿ ಮಸೀದಿ ನಿರ್ಮಿಸಲಾಗಿತ್ತು. ಹಾಗಾಗಿ ಈ ದೇಗುಲಗಳನ್ನು ಪುನಃ ಸ್ಥಾಪಿಸಲು ಹಿಂದೂ, ಜೈನರಿಗೆ ಅವಕಾಶ ನೀಡಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಈ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ಸಿವಿಲ್ ನ್ಯಾಯಾೀಶೆ ನೇಹಾ ಶರ್ಮಾ, ಡಿಸೆಂಬರ್ 24ಕ್ಕೆ ವಿಚಾರಣೆ ಮುಂದೂಡಿದ್ದಾರೆ. ಜೈನ ತೀರ್ಥಂಕರ ರಿಷಬ್ ದೇವ್ ಹಾಗೂ ಶ್ರೀ ವಿಷ್ಣು ಪರವಾಗಿ ವಕೀಲ ಹರಿ ಶಂಕರ್ ಜೈನ್‍ಹಾಗೂ ರಂಜನಾ ಅಗ್ನಿಹೋತ್ರಿ ಅರ್ಜಿ ಸಲ್ಲಿಸಿದ್ದಾರೆ. ಇನ್ನು ಕುತುಬ್ ಉದ್ ದಿನ್ ಐಬಕ್ ಆಡಳಿತಾವಯಲ್ಲಿ 27 ಮಂದಿರ ಕೆಡವಿ ಮಸೀದಿ ನಿರ್ಮಿಸಲಾಗಿರುವ ಬಗ್ಗೆ ಭಾರತೀಯ ಪುರಾತತ್ಮ ಇಲಾಖೆಯ (ಎಎಸ್‍ಐ) ವರದಿಯಲ್ಲೂ ಉಲ್ಲೇಖವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ