ಹೊಸದಿಲ್ಲಿ: ಬಿಹಾರದಲ್ಲಿ ಸಮೀಪಿಸುತ್ತಿರುವ ವಿಧಾನಸಭೆ ಚುನಾವಣೆ ಹಾಗೂ ದೇಶದ ವಿವಿಧ ರಾಜ್ಯಗಳಲ್ಲಿ ನಡೆಯಲಿರುವ ಉಪ ಚುನಾವಣೆಯ ಬೆನ್ನಲ್ಲೇ, ಲೋಕಸಭೆ, ವಿಧಾನಸಭೆ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮಿತಿಯನ್ನು ಶೇ.10ರಷ್ಟು ಕೇಂದ್ರ ಸರ್ಕಾರ ಹೆಚ್ಚಿಸಿದೆ. ಚುನಾವಣಾ ಆಯೋಗದೊಂದಿಗೆ ಚರ್ಚೆ ನಡೆಸಿದ ಬಳಿಕವೇ ಕೇಂದ್ರ ಸರ್ಕಾರ ಚುನಾವಣಾ ವೆಚ್ಚದ ಮಿತಿಯನ್ನು ಹೆಚ್ಚಿಸಿದೆ ಎಂದು ತಿಳಿದುಬಂದಿದೆ.
ಈ ಕುರಿತಾಗಿ ಕಾನೂನು ಸಚಿವಾಲಯ ಅಸೂಚನೆ ಹೊರಡಿಸಿದ್ದು, ಲೋಕಸಭೆಯಲ್ಲಿ ಸ್ರ್ಪಸುವ ಅಭ್ಯರ್ಥಿಗಳ ಗರಿಷ್ಠ ಚುನಾವಣಾ ವೆಚ್ಚದ ಮಿತಿಯನ್ನು 70ಲಕ್ಷ ರೂ.ನಿಂದ 77 ಲಕ್ಷ ರೂ.ಗೆ ಹೆಚ್ಚಿಸಿದೆ. ಸಣ್ಣ ರಾಜ್ಯಗಳಿಂದ ಸ್ರ್ಪಸಲಿರುವ ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನು 54 ಲಕ್ಷ ರೂ.ನಿಂದ 59 ಲಕ್ಷಕ್ಕೆ ಏರಿಸಲಾಗಿದೆ. ಇನ್ನು ವಿಧಾನಸಭೆ ಅಭ್ಯರ್ಥಿಗಳ ವೆಚ್ಚವನ್ನು 25 ಲಕ್ಷ ರೂ.ನಿಂದ 30 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಬಿಹಾರದಲ್ಲಿ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಬಿಹಾರ ಇದರ ಲಾಭವನ್ನು ಪಡೆಯುವ ಮೊದಲ ರಾಜ್ಯ ಎನಿಸಿದೆ.