114ಮಲ್ಟಿರೋಲ್ ಯುದ್ಧ ವಿಮಾನಗಳ ದೇಶಿ ಉತ್ಪಾದನೆ

ಹೊಸದಿಲ್ಲಿ :ಭಾರತೀಯ ವಾಯುಪಡೆಯ ಸಾಮಥ್ರ್ಯ ಹೆಚ್ಚಿಸಲು 83 ಎಲ್‍ಸಿಎ ತೇಜಸ್ ಮಾರ್ಕ್1ಎ ಯುದ್ಧವಿಮಾನ ಒಪ್ಪಂದಕ್ಕೆ ಏರೋ ಇಂಡಿಯಾ ಸಂದರ್ಭದಲ್ಲಿ ಸಹಿ ಹಾಕಲು ಕೇಂದ್ರ ಸಿದ್ಧವಾಗಿರುವ ನಡುವೆಯೇ, 1.3 ಲಕ್ಷ ಕೋಟಿ ವೆಚ್ಚದಲ್ಲಿ 114ಮಲ್ಟಿರೋಲ್ ಯುದ್ಧ ವಿಮಾನಗಳ ದೇಶಿ ಉತ್ಪಾದನೆಗೂ ಭಾರತೀಯ ವಾಯುಪಡೆ ಯೋಜಿಸುತ್ತಿದೆ ಎಂದು ತಿಳಿದುಬಂದಿದೆ.
ಈ ಬಹುಕೋಟಿ ಯೋಜನೆಗಾಗಿ ಐಎಎಫ್ ಈಗಾಗಲೇ ಟೆಂಡರ್ ಮಾಹಿತಿಗಾಗಿ (ಆರ್‍ಎಫ್) ವಿನಂತಿಸಿದ್ದು, ರಕ್ಷಣಾ ಸಚಿವಾಲಯದ ಮುಂದೆ ಶೀಘ್ರವೇ ಅಗತ್ಯ ಸ್ವೀಕಾರ (ಎಒಎನ್) ಪಡೆಯಲು ಪ್ರಸ್ತಾಪವನ್ನೂ ಸಲ್ಲಿಸಲಿದೆ. ಈ ಯೋಜನೆಯು 4.5 ಪ್ಲಸ್ ಜನರೇಷನ್ ವಿಮಾನಗಳನ್ನು ಸ್ವಾೀನಪಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಅಲ್ಲದೆ, ಯುದ್ಧ ವಿಮಾನಗಳ ರಾಫೆಲ್‍ಗಳ ಸಾಮಥ್ರ್ಯಕ್ಕೆ ಸರಿಹೊಂದುವಂತ ವಿಮಾನಗಳನ್ನು ಒದಗಿಸುತ್ತದೆ ಎಂದು ಅಕಾರಿಗಳು ಹೇಳಿದ್ದಾರೆ.
ಇನ್ನು ಐಎಎಫ್‍ನ ಆರ್‍ಎಫ್‍ಐ ಪ್ರಸ್ತಾಪಕ್ಕೆ ಅಮೆರಿಕ, ಫ್ರಾನ್ಸ್, ರಷ್ಯಾ, ಸ್ವೀಡನ್ ಸೇರಿ ಹಲವು ದೇಶಗಳ ಪ್ರಮುಖ ಯುದ್ಧ ವಿಮಾನ ತಯಾರಕ ಸಂಸ್ಥೆಗಳು ಕೂಡ ಪ್ರತಿಕ್ರಿಯಿಸಿವೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಜತೆಗೆ ಯುದ್ಧ ವಿಮಾನದ ಸಾಮಥ್ರ್ಯ ಜತೆಗೆ ಅವುಗಳ ಬೆಲೆ ವಿಚಾರವನ್ನು ಐಎಎಫ್ ಗಣನೆಗೆ ತೆಗೆದುಕೊಳ್ಳುತ್ತಿದ್ದು, ವಾಯುಪಡೆ ಸಾಮಥ್ರ್ಯ ಹೆಚ್ಚಿಸಲು ಏಕ ಎಂಜಿನ್ ಹಾಗೂ ಡಬಲ್ ಎಂಜಿನ್ ಯದ್ಧವಿಮಾನಗಳ ಆಯ್ಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಸಾಧ್ಯತೆ ಇದೆ ಎಂದೂ ಹೇಳಲಾಗಿದೆ.
ಯೋಜನೆ ಅನ್ವಯ ವಾಯುಪಡೆ ಈಗ ಯಾವು ವಿಮಾನವನ್ನು ಆರಿಸಲಿದೆಯೋ ಅದು ಮುಂದಿನ 40 ವರ್ಷಗಳ ವರೆಗೆ ಸೇನೆಯ ಮುಖ್ಯ ಆಧಾರವಾಗಿ ಉಳಿಯಲಿದೆ ಈ ಹಿನ್ನೆಲೆ ಐಎಎಫ್ ಹಾಗೂ ರಕ್ಷಣಾ ಸಚಿವಾಲಯ ಯುದ್ಧ ವಿಮಾನಗಳ ಉತ್ಪಾದನೆಯಲ್ಲಿ ತೀವ್ರ ಸೂಕ್ಷ್ಮತೆ ವಹಿಸಿವೆ ಎಂದು ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ