ನವದೆಹಲಿ: ಅಳ್ವಾರ್ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ಇಷ್ಟು ದಿನ ಪ್ರಧಾನಿ ನರೇಂದ್ರ ಮೋದಿ ಯಾವುದೇ ಹೇಳಿಕೆ ನೀಡದೇ ಮೌನವಾಗಿದ್ದರು. ಈಗ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಲಾಭ ಮಾಡಿಕೊಡಲು ಆ ಘಟನೆಯನ್ನು ರಾಜಕೀಯವಾಗಿ ಬಳಸಿಕೊಳ್ಳಲು ಆರಂಭಿಸಿದ್ದಾರೆ ಎಂದು ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಗುಡುಗಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಮಾಯಾವತಿ, ರಾಜಕೀಯ ಲಾಭಕ್ಕಾಗಿ ಪ್ರಧಾನಿ ಮೋದಿ ತಮ್ಮ ಪತ್ನಿಯನ್ನೇ ತೊರೆದಿದ್ದಾರೆ. ಇಂಥವರಿಂದ ಇತರರ ಸಹೋದರಿಯರು ಮತ್ತು ಪತ್ನಿಗೆ ಗೌರವ ನಿರೀಕ್ಷಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಬಿಜೆಪಿಯಲ್ಲಿ ಮಹಿಳೆಯರು ತಮ್ಮ ಪತಿಯಂದಿರು ಪ್ರಧಾನಿ ಮೋದಿ ಅವರ ಸುತ್ತಮುತ್ತ ಸುಳಿದರೂ ನಡಗುತ್ತಾರೆ. ತಮ್ಮನ್ನು ತೊರೆಯುವಂತೆ ಅವರ ಮೇಲೆ ಪ್ರಧಾನಿ ಮೋದಿ ಪ್ರಭಾವ ಬೀರಬಹುದು ಎಂಬ ಆತಂಕದಿಂದ ಇರುವುದಾಗಿ ಹೇಳಿದ್ದಾರೆ.
Mayawati,PM Modi,Lok sabha election