ಪ್ರಧಾನಿ ಮೋದಿಯವರಿಗೆ ದೇಶದ ಭದ್ರತೆಗಿಂತ ಫೋಟೋ ಶೂಟ್ ಮುಖ್ಯ: ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ಪುಲ್ವಾಮಾ ಉಗ್ರರ ದಾಳಿಯಲ್ಲಿ ಯೋಧರು ಹುತಾತ್ಮರಾಗಿ, ಇಡೀ ದೇಶವೇ ಕಂಬನಿ ಮಿಡಿಯುತ್ತಿದ್ದರೆ ಪ್ರಧಾನಿ ಮೋದಿ ಮಾತ್ರ ಫೋಟೋಶೂಟ್ ನಲ್ಲಿ ತೊಡಿಗಿದ್ದರು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಮ್ಧಿ ಕಿಡಿಕಾರಿದ್ದಾರೆ.

ಉಗ್ರರ ದಾಳಿಯಲ್ಲಿ 40ಕ್ಕೂ ಹೆಚ್ಚು ಭಾರತೀಯ ಯೋಧರು ಮೃತಪಟ್ಟು, ಇಡೀ ದೇಶವೇ ದು:ಖದಲ್ಲಿದ್ದರೆ ಪ್ರಧಾನಿಗಳು ಮಾತ್ರ ಸಂಜೆಯವರೆಗೂ ಫೋಟೋಶೂಟ್ ನಲ್ಲಿ ನಿರತರಾಗಿದ್ದರು. ಇವರು ದೇಶದ ಪ್ರಧಾನಿಯಲ್ಲ ಪ್ರೈಮ್ ಟೈಮ್ ಪ್ರಧಾನಿಯೆಂದು ರಾಹುಲ್ ಗಾಂಧಿ ಗುಡುಗಿದ್ದಾರೆ.

ಪುಲ್ವಾಮಾದಲ್ಲಿ ಉಗ್ರ ದಾಳಿ ಮೂರು ಗಂಟೆಗಳ ಬಳಿಕವೂ ಪ್ರಧಾನಿ ಮೋದಿಯವರು ಫೋಟೋಶೂಟ್ ನಲ್ಲಿ ತೊಡಗಿದ್ದರು. ಅವರಿಗೆ ದೇಶದ ಭದ್ರತೆಗಿಂತ ಅವರ ಫೋಟೋಶೂಟ್ ಮುಖ್ಯವಾಗಿತ್ತು ಎಂದರು.

ಫೆಬ್ರವರಿ 14ರಂದು ಪ್ರಧಾನಿ ಅವರು ಕೊರ್ಬೆಟ್ ನ್ಯಾಷನಲ್ ಪಾರ್ಕ್ ನಲ್ಲಿ ಫೋಟೋಶೂಟ್ ಮಾಡಿಸಿದ್ದು ವಿವಿಧ ಭಂಗಿಯಲ್ಲಿ ಫೋಟೋಗಳಿಗೆ ಪೋಸ್ ನೀಡುತ್ತಿದ್ದರು. ಪ್ರಧಾನಿಯವರ ಈ ನಡೆ ಖಂಡನೀಯವಾಗಿದೆ ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

ಪ್ರಧಾನಿ ಮೋದಿಯವರು ಫೋಟೋಶೂಟ್ ನಲ್ಲಿ ಭಾಗಿಯಾಗಿದ್ದ ಕುರಿತು ರಾಹುಲ್ ಟ್ವೀಟರ್ ನಲ್ಲಿ ವಿಡಿಯೋ ಒಂದನ್ನು ಅಪ್ ಲೋಡ್ ಮಾಡಿದ್ದು, ಅದಕ್ಕೆ ಫೋಟೊಶೂಟ್ ಸರ್ಕಾರ್ ಎಂದು ಹ್ಯಾಶ್ ಟ್ಯಾಗ್ ನೀಡಿದ್ದಾರೆ.

Pulwama attack, Rahul gandhi,PM Modi, fires ‘prime time minister’, ‘photoshoot sarkar’

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ