ಕೋಲಾರ: ಮೇಕ್ ಇನ್ ಇಂಡಿಯಾ ಎಂದು ಹೇಳುವ ಪ್ರಧಾನಿ ಮೋದಿ ಯುವಕರಿಗಾಗಿ ಎಷ್ಟು ಉದ್ಯೋಗ ಸೃಷ್ಟಿ ಮಾಡಿದಿರಿ? ಯುವಜನತೆಗಾಗಿ ಯಾವ ಯೋಜನೆಗಳನ್ನು ಜಾರಿಗೆ ತಂದಿದ್ದೀರಿ…? ದೇಶದಲ್ಲಿ ಎಷ್ಟು ರೈತರ ಸಾಲ ಮನ್ನಾ ಮಾಡಿದ್ದೀರಿ ಎಂದುದನ್ನು ಉತ್ತರಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿಯವರಿಗೆ ಪ್ರಶ್ನಿಸಿದ್ದಾರೆ.
ಕೋಲಾರದ ನಗರದಲ್ಲಿ ಕಾಂಗ್ರೆಸ್ ಪರಿವರ್ತನಾ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಲೋಕಸಭಾ ಚುನಾವಣೆಯ ಭಾಷಣಗಳಲ್ಲಿ ಪ್ರಧಾನಿ ಮೋದಿ ಎಲ್ಲಿಯೂ ಉದ್ಯೋಗ ಖಾತ್ರಿ, ರೈತರ ಬಗ್ಗೆ ಮಾತನಾಡಿಲ್ಲ. ಬಿಜೆಪಿ ಪ್ರಣಾಳಿಕೆಯಲ್ಲಿಯೂ ಈ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. 2014ರಲ್ಲಿ 15 ಲಕ್ಷ ರೂ. ಖಾತೆಗೆ ಹಾಕ್ತೀನಿ ಎಂದು ಹೇಳಿದವ್ರು ಆದರೆ ಈ ವರೆಗೆ ಯಾರಿಗೂ ಹಣ ಬಂದಿಲ್ಲ. ಚೌಕಿದಾರ ಎಂದು ಹೇಳುವ ಮೋದಿ ಹೋದಲೆಲ್ಲ ಸುಳ್ಳು ಭರವಸೆಗಳನ್ನು ನೀಡುತ್ತಾ, ದೇಶದ ಜನರನ್ನು ದೋಚುವ ಕೆಲಸ ಮಾಡುತ್ತಿದ್ದಾರೆ ಎಂದರು.
ಅಂಬಾನಿಯನ್ನು ಆಲಂಗಿಸುತ್ತೀರಾ. ಆದರೆ ರೈತರನ್ನು ಯಾಕೆ ಆಲಂಗಿಸಲ್ಲ. ಮೋದಿಯವರೆ ಕಳೆದ 5 ವರ್ಷಗಲಲ್ಲಿ ನಿರುದ್ಯೋಗಿ ಯುವಕರಿಗಾಗಿ ಏನು ಕೆಲಸ ನೀಡಿದ್ದೀರಿ, ಎಷ್ಟು ಉದ್ಯೋಗ ಸೃಷ್ಠಿಸಿದ್ದೀರಿ. ಮೊದಲು ಉತ್ತರಿಸಿ. ರಾಜ್ಯದಲ್ಲಿ ರೈತರ ಸಾಲ ಮನ್ನಾ ಮಾಡಲಾಗಿದೆ. ದೇಶದಲ್ಲಿ ನೀವು ಎಷ್ಟು ರೈತರ ಸಾಲ ಮನ್ನಾ ಮಾಡೀದ್ದೀರಿ ಎಂದು ಪ್ರೆಶ್ನಿಸಿದರು.
ದೇಶವನ್ನು ಒಟ್ಟುಗೂಡಿಸುವ, ದೇಶದ ಜನರಿಗಾಗಿ ಕೆಲಸ ಮಾಡುವ ಕಾಂಗ್ರೆಸ್ ಒಂದುಕಡೆಯಿದೆ. 15 ಜನರಿಗಾಗಿ ಕೆಲಸಮಾಡುವ ಮೋದಿ ಒಂದುಕಡೆಯಲ್ಲಿದ್ದಾರೆ.
ಕಾವಲುಗಾರ ಸುಳ್ಳು ಹೇಳಿ ದೇಶದ ಜನತೆಗೆ ಮೋಸ ಮಾಡುತ್ತಿದ್ದಾರೆ. ಈ ದೇಶದ ಬಡವರ, ರೈತರ, ಕಾರ್ಮಿಕರ ಹಣ ದೋಚಿ ಶ್ರೀಮಂತರಿಗೆ ನೀಡುತ್ತಿದ್ದಾರೆ.
ಮೇಹುಲ್ ಚೋಕಿಸಿ, ನೀರವ್, ಲಲಿತ್ ಮೋದಿ, ಈಗ ನರೇಂದ್ರ ಮೋದಿ ಕೂಡ ಹಣ ದೋಚಿದ್ದಾರೆ. ಈ ಎಲ್ಲರ ಹೆಸರೂ ಮೋದಿ ಮೋದಿ ಅಂತಲೇ ಇದೆ. ಎಲ್ಲಾ ಕಳ್ಳರ ಹೆಸರೂ ಒಂದೇ ಇದೆ. ಅಂಬಾನಿ, ಮಲ್ಯ, ಮೋದಿ ಎಲ್ಲರೂ ಸೇರಿ ಹಣ ದೋಚಿದ್ದಾರೆ.
ಮೊದಲು ನೋಟ್ ಬ್ಯಾನ್, ಬಳಿಕ ಜಿಎಸ್ ಟಿ ಜಾರಿಗೆ ತಂದ್ರು. ಇದರಿಂದ ದೇಶದಲ್ಲಿನ ಸಣ್ಣ ಉದ್ಯಮಗಳು ಸಂಪೂರ್ಣ ನಾಶವಾದವು. ಉದ್ಯಗೋ ನೀಡುತ್ತೇವೆ ಎಂದು ಆಶ್ವಾನ ನೀಡರು. ಆದರೆ ಐದು ವರ್ಷಗಳಲ್ಲಿ ದೇಶದ ಯುವಕರಿಗೆ ಯಾವುದೇ ಉದೋಗವಾಗಲೀ, ಯುವಜನತೆಗಾಗಿ ಯಾವುದೇ ಯೋಜನೆಯಾಗಲಿ ಜಾರಿಗೆ ಬಂದಿಲ್ಲ.
ಅನಿಲ್ ಅಂಬಾನಿಯಂತಹ ಉದ್ಯಮಿ ಸಾಲ ಪಡೆದರೂ ಹಣ ಮರುಪಾವತಿ ಮಾಡಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಸಾಲ ಮರುಪಾವತಿ ಮಾಡದ ರೈತ ಜೈಲಿಗೆ ಹೋಗಲ್ಲ ಎಂದು ಕಾಂಗ್ರೆಸ್ ಭರವಸೆ ನೀಡುತ್ತಿದೆ. ಮೇಕ್ ಇನ್ ಇಂಡಿಯಾ ಸೇರಿದಂತೆ ಹಲವು ಘೋಷಣೆಗಳನ್ನು ಕೇಳಿ ಯುವಕರು ಸುಸ್ತಾಗಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಖಾಲಿ ಇರುವ ಎಲ್ಲ ಕೇಂದ್ರ ಸರ್ಕಾರದ ಹುದ್ದೆಗಳನ್ನು ಭರ್ತಿ ಮಾಡುತ್ತವೆ.
ಪ್ರಧಾನಿ ಮೋದಿ ಕೊಟ್ಟ ಭರವಸೆ ಈಡೇರಿಸಿಲ್ಲ. ಆದರೆ ನಾನು 5 ವರ್ಷದಲ್ಲಿ 3.5 ಲಕ್ಷ ಹಣ ಹಾಕುತ್ತೇನೆ. ದೇಶದ 5 ಕೋಟಿ ಬಡ ಜನತೆಗೆ ಈ ಯೋಜನೆ ತಲುಪುತ್ತೆ ಮೋದಿ 15 ಲಕ್ಷ ಹಾಕುವುದಾಗಿ ಆಶ್ವಾಸನೆ ನೀಡಿದ್ರು. ಬಡವರ ಖಾತೆಗೆ ಹಣ ಹಾಕಲು ನಾನು ಯೋಚಿಸಿದ್ದೆ. ಹೀಗಾಗಿ ಹಿರಿಯರ ಜತೆ ಚರ್ಚಿಸಿ ಈ ಬಗ್ಗೆ ನಿರ್ಧರಿಸಿದೆ.
ಅದಕ್ಕಾಗಿ ನ್ಯಾಯ್ ಯೋಜನೆ ಜಾರಿಗೊಳಿಸುತ್ತೇವೆ ಎಂದರು.
ನಿಖರವಾಗಿ ರೈತರ ಖಾತೆಗೆ ಎಷ್ಟು ಹಣ ಹಾಕಬಹುದು ಎಂಬುದರ ಅಂಕಿ-ಅಂಶ ನೀಡಬೇಕೆಂದು ಕೇಳಿಕೊಂಡಿದ್ದೆ. ನಿಖರ ಅಂಕಿ ಅಂಶಗಳ ಪ್ರಕಾರ ಬಡ ಕುಟುಂಬಕ್ಕೆ ತಿಂಗಳಿಗೆ 6 ಸಾವಿರ, ವರ್ಷಕ್ಕೆ 72 ಸಾವಿರ ನೀಡಲು ಸಾಧ್ಯ ಎಂಬುವುದು ತಿಳಿದಿದೆ. ಅದೇ ಅಂಕಿ-ಅಂಶಗಳನ್ನು ನಿಮ್ಮ ಮುಂದಿಟ್ಟಿದ್ದೇವೆ.
ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ರೈತರಿಗಾಗಿಯೇ ಬಜೆಟ್ ಮಂಡಿಸುತ್ತೇವೆ. ಸಾಮಾನ್ಯ ಬಜೆತ್ ಜತೆಗೆ ರೈತರಿಗಾಗಿಯೇ ಬಜೆಟ್ ಮಂಡಿಸಲಾಗುವುದು. ರೈತರ ಬೆಳೆಗಳಿಗಾಗಿ ಕನಿಷ್ಠ ಬೆಂಬಲ ಬೆಲೆ ಹೆಚ್ಚಳಮಾಡುತ್ತೇವೆ. ಸರಳ ತೆರಿಗೆ ಜಾರಿಗೊಳಿಸುತ್ತೇವೆ. ನಮ್ಮ ಪ್ರಣಾಳಿಕೆಯಲ್ಲಿ ಹೇದಂತೆ ನಮ್ಮ ಸರ್ಕಾರದಲ್ಲಿ ಕರ್ನಾಟಕದ ಯಾವುದೇ ಯುವಕರು ಸಣ್ಣ ಉದ್ಯಮವನ್ನು ಆರಂಭಿಸಲು ಯಾವುದೇ ಪರವಾನಗಿ ತೆಗೆದುಕೊಳ್ಳುವ ಅಗತ್ಯವಿಲ್ಲ. ಮೂರು ವರ್ಷದವರೆಗೆ ಪರವಾನಗಿ ಬೇಕಿಲ್ಲ.
ಆಹಾರ ಸಂಕರಣಾ ಘಟಕ ಸ್ಥಾಪನೆ ಮಾಡುತ್ತೇವೆ. ನ್ಯಾಯ್ ಯೋಜನೆಯಿಂದ ವರ್ಷಕ್ಕೆ 72 ಸಾವಿರ ಹಣವನ್ನು ಮಹಿಳೆಯರ ಖಾತೆಗೆ ನೇರವಾಗಿ ಹೋಗುವಂತೆ ಮಾಡಲಾಗುತ್ತದೆ. ಅಲ್ಲದೇ ದೇಶದ ಲೋಕಸಭೆ, ರಾಜ್ಯಸಭೆ, ವಿಧಾನಸಭೆಯಲ್ಲಿ ಶೇ.33 ಪರ್ಸೆಂಟ್ ಮಹಿಳೆಯರಿಗೆ ಅವಕಾಶ ನೀಡದಲಾಗುವುದು. ಕೇಂದ್ರ ಸರ್ಕಾರಿ ನೌಕರಿಯಲ್ಲಿಯೂ ಶೇ.33ರಷ್ಟು ಮಹಿಳೆಯರಿಗೆ ಮೀಸಲಾತಿ ನೀಡಲಗುವುದುಎಂದು ಹೇಳಿದರು.
rahul gandhi,kolar,parivartana rally