ರಾಹುಲ್ ಗಾಂಧಿ ಭೇಟಿ ನೀಡಿದ ಸ್ಥಳವನ್ನು ಗೋಮೂತ್ರಹಾಕಿ ಶುದ್ಧೀಕರಣಗೊಳಿಸಿದ ಬಿಜೆಪಿ ಕಾರ್ಯಕರ್ತರು

ಬಾಗಲಕೋಟೆ:ಫೆ-26: ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಂಡಿರುವ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿಯವರು ಭೇಟಿ ಕೊಟ್ಟ ಬಾಗಲಕೋಟೆಯ ಮುಚಖಂಡಿ ಕ್ರಾಸ್​ ಬಳಿ ಬಿಜೆಪಿ ಕಾರ್ಯಕರ್ತರು ಶುದ್ಧೀಕರಣ ಕಾರ್ಯ ನಡೆಸಿದರು.

ಗೋಮಾತೆಗೆ ಪೂಜೆ ಸಲ್ಲಿಲ್ಲಿ ಗೋಮೂತ್ರ ಸಿಂಪಡಣೆ ಮಾಡುವ ಮೂಲಕ ಶುದ್ಧಗೊಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಕಾರ್ಯಕರ್ತರು ರಾಹುಲ್ ಗಾಂಧಿ​ ಬಸವಣ್ಣನ ವಚನಗಳನ್ನು ತಪ್ಪಾಗಿ ಹೇಳುವ ಮೂಲಕ ಈ ನೆಲಕ್ಕೆ ಅಪಮಾನ ಮಾಡಿದ್ದಾರೆ. ಹಾಗಾಗಿ ಶುದ್ಧಗೊಳಿಸಲಾಗುತ್ತಿದೆ ಎಂದಿದ್ದಾರೆ.

ಅಷ್ಟೇ ಅಲ್ಲದೆ, ಬಾಗಲಕೋಟೆ ಸಮಾವೇಶಕ್ಕೆ ರಾಹುಲ್​ ಗಾಂಧಿ ಆಗಮಿಸುತ್ತಿದ್ದಂತೆ ಬಿಜೆಪಿ ಬೆಂಬಲಿಗರು ಪ್ರಧಾನಿ ಮೋದಿ ಘೋಷಣೆ ಕೂಗಿದರು. ನಿರಂತರ ಘೋಷಣೆ ಮಾಡತೊಡಗಿದಾಗ ಪೊಲೀಸರು ಲಾಠಿ ಹಿಡಿದು ಗುಂಪುಚದುರಿಸಿದ್ದಾರೆ.

Bagalakote,BJP,cleansing,muchakhandi cross,Rahul gandhi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ