ರಾಹುಲ್ ಗಾಂಧಿ ಭಾಷಣಕ್ಕೆ ಶಿವಸೇನೆ ಮೆಚ್ಚುಗೆ

ನವದೆಹಲಿ:ಜು-೨೧: ಅವಿಶ್ವಾಸ ನಿರ್ಣಯ ಮಂಡನೆ ಚರ್ಚೆ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಮಾಡಿದ್ದ ಭಾಷಣಕ್ಕೆ ಶಿವಸೇನೆ ಮೆಚ್ಚುಗೆ ವ್ಯಕ್ತಪಡಿಸಿದೆ.

ಈ ಕುರಿತು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಬರೆದುಕೊಂಡಿದ್ದು, ರಾಹುಲ್ ಗಾಂಧಿ ಭಾಷಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ. ಲೋಕಸಭೆಯಲ್ಲಿ ರಾಹುಲ್ ಗಾಂಧಿಯವರು ಪ್ರಧಾನಿ ಮೋದಿಯವರನ್ನು ಆಲಂಗಿಸಿದ್ದನ್ನು ಪ್ರಮುಖವಾಗಿ ತೆಗೆದುಕೊಂಡಿರುವ ಶಿವಸೇನೆ, ರಾಹುಲ್ ಗಾಂಧಿಯವರಿಗೆ ಭೇಷ್ ಎಂದಿದೆ. ಅಲ್ಲದೆ, ಮೋದಿ ವಿರುದ್ಧ ರಾಹುಲ್ ಮಾಡಿದ್ದ ಆರೋಪಿಗಳು ಹಾಗೂ ಜುಮ್ಲಾ ಸ್ಟ್ರೈಕ್ ಹೇಳಿಕೆಗಳನ್ನು ಪ್ರಮುಖ ವಿಚಾರಗಳನ್ನಾಗಿಸಿದೆ.
ಭಾಷಣದ ಬಳಿಕ ರಾಹುಲ್ ಗಾಂಧಿ, ಮೋದಿಯವರನ್ನು ಆಲಂಗಿಸಿಕೊಂಡು ಹೊಸ ರಾಜಕೀಯ ಸಂಪ್ರದಾಯವನ್ನು ಆರಂಭಿಸಿದ್ದಾರೆಂದು ಹೇಳಿದೆ.

Shiv Sena,Rahul gandhi,No confidence motion

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ