ಬಿಜೆಪಿ-ಶಿವಸೇನೆ ಭಿನ್ನಾಭಿಪ್ರಾಯ ಮರೆತು ಮತ್ತೆ ಒಂದಾಗಿದ್ದೇವೆ: ಉದ್ಧವ್ ಠಾಕ್ರೆ

ಗಾಂಧಿನಗರ: ಬಿಜೆಪಿ ಹಾಗೂ ಶಿವಸೇನೆ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಿದ್ದೇವೆ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಸಾರ್ವಜನಿಕ ಹಿತಾಸಕ್ತಿ ವಿಷಯಗಳನ್ನು ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ಶಿವಸೇನೆ ಹೋರಾಡಿತ್ತು. ಇದು ಉಭಯ ಪಕ್ಷಗಳ ನಡುವಿನ ಬಿರುಕಿಗೆ ಕಾರಣವಾಗಿತ್ತು. ಆದರೆ, ಹಾಗೆಂದು ಉಭಯ ಪಕ್ಷಗಳು ಪರಸ್ಪರ ಬೆನ್ನಿಗೆ ಚೂರಿ ಹಾಕಲಿಲ್ಲ ಎಂಬುದನ್ನು ಗಮನಿಸಬೇಕು ಎಂದು ಉದ್ಧವ್​ ಠಾಕ್ರೆ ಹೇಳಿದ್ದಾರೆ.

ಗಾಂಧಿನಗರ ಕ್ಷೇತ್ರದಿಂದ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸುವ ಮುನ್ನ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಆಯೋಜಿಸಿರುವ ವಿಜಯ್​ ಸಂಕಲ್ಪ್​ ಸಭಾದಲ್ಲಿ ಮಾತನಾಡಿದ ಅವರು, ಈಗ ಭಿನ್ನಾಭಿಪ್ರಾಯಗಳನ್ನು ನಿವಾರಿಸಿಕೊಂಡು ಉಭಯ ಪಕ್ಷಗಳು ಮತ್ತೆ ಒಂದಾಗಿದ್ದೇವೆ ಎಂದರು.

ಮಹಾರಾಷ್ಟ್ರವಿಧಾನಸಭೆ ಮತ್ತು 2014ರ ಲೋಕಸಭೆ ಚುನಾವಣೆಯಲ್ಲಿ ಪರಸ್ಪರ ಮೈತ್ರಿ ಹೊಂದಿದ್ದರೂ, ಕೆಲವು ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಶಿವಸೇನೆ ಮತ್ತು ಬಿಜೆಪಿ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿತ್ತು. ಇದರಿಂದಾಗಿ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರದಿಂದ ಶಿವಸೇನೆಯ ಪ್ರತಿನಿಧಿಗಳು ಹೊರಬಂದಿದ್ದರು. ಆದರೆ, ಈಗ ಈ ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಉಭಯ ಪಕ್ಷಗಳು ಒಂದಾಗಿವೆ.
shivasena,bjp,udhav tackrey

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ