ಎಸ್ ಪಿ-ಬಿಎಸ್ ಪಿ ಮೈತ್ರಿ ತೊರೆದ ನಿಶಾದ್​ ಪಾರ್ಟಿ: ಬಿಜೆಪಿ ಸೇರುವ ಸಾಧ್ಯತೆ

ಲಖನೌ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷದ ಜತೆ ಮೈತ್ರಿ ಮಾಡಿಕೊಂಡಿದ್ದ ನಿಶಾದ್​ ಪಾರ್ಟಿ ಈಗ ಆ ಮೈತ್ರಿಯಿಂದ ಹೊರಬಿದ್ದಿದೆ.

ನಿಶಾದ್​ ಪಾರ್ಟಿ ಮುಖ್ಯಸ್ಥ ಸಂಜಯ್​ ನಿಶಾದ್​ ಅವರು ಮಹಾರಾಜ್​ಗಂಜ್​ನಿಂದ ಆ ಪಕ್ಷದ ಚಿಹ್ನೆಯನ್ನು ಮುಂದಿಟ್ಟು ಸ್ಪರ್ಧಿಸುವ ವಿಚಾರದಲ್ಲಿ ಮೈತ್ರಿ ಪಕ್ಷಗಳೊಂದಿಗೆ ಒಮ್ಮತದ ಅಭಿಪ್ರಾಯ ಸಾಧ್ಯವಾಗದ ಕಾರಣ ಹೊರಬಿದ್ದಿರುವುದಾಗಿ ಪಕ್ಷ ತಿಳಿಸಿದೆ.

ನಿಶಾದ್​ ಪಕ್ಷದ ಅಧ್ಯಕ್ಷ ಸಂಜಯ್​ ನಿಶಾದ್​ ಹಾಗೂ ಅವರ ಪುತ್ರ, ಗೋರಖ್​ ಪುರ ಹಾಲಿ ಸಂಸದ ಪ್ರವೀಣ್​ ನಿಶಾದ್​ ಇಬ್ಬರೂ ಶುಕ್ರವಾರ ಯೋಗಿ ಆದಿತ್ಯನಾಥ್​ ಜತೆ ಮಾತುಕತೆ ನಡೆಸಿದ್ದು ಬಿಜೆಪಿ ಸೇರುವ ಎಲ್ಲ ಸಾಧ್ಯತೆಗಳೂ ಇವೆ ಎನ್ನಲಾಗಿದೆ.

ಕಳೆದ ವರ್ಷ ನಡೆದ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷ ನಿಶಾದ್​ ಪಾರ್ಟಿಯೊಂದಿಗೆ ಸೇರಿ ಗೋರಖ್​ಪುರದಲ್ಲಿ ಬಿಜೆಪಿಯನ್ನು ಸೋಲಿಸಿ ಆಘಾತ ನೀಡಿತ್ತು.

ಪ್ರವೀಣ್​ ನಿಶಾದ್​ಗೆ ಪಕ್ಷದಿಂದ ಟಿಕೆಟ್​ ನೀಡಿ ಅವರನ್ನು ಗೆಲ್ಲಿಸಿತ್ತು. ಈ ಮೂಲಕ ಮೂರು ವರ್ಷಗಳಿಂದ ಅಲ್ಲಿ ಆಡಳಿತ ನಡೆಸಿದ್ದ ಬಿಜೆಪಿ ಸೋಲುಂಡಿತ್ತು.

Days after joining SP-BSP alliance, Nishad Party walks out

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ