ಟೊಂಕ್: ನಾನು ಪಾಕ್ ಪ್ರಧಾನಿಗೆ ಹೇಳಿದ್ದೆ ‘ನಾವು ಬಡತನ ಹಾಗೂ ಅನಕ್ಷರತೆ ವಿರುದ್ಧ ಒಗ್ಗೂಡಿ ಹೋರಾಡೋಣ ಎಂದು’ ಆದರೆ, ಅವರು ಹೇಳಿದ್ದರು ನಾನು ಪಠಾಣ್ ಮಗನಾಗಿದ್ದು, ತನ್ನ ಹೇಳಿಕೆ ಬದ್ಧವಾಗಿದ್ದೇನೆ ಎಂದಿದ್ದರು. ಈಗ ಅವರ ಮಾತುಗಳನ್ನು ಒರೆಗೆ ಹಚ್ಚುವ ಕಾಲ ಬಂದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ರಾಜಸ್ಥಾನದ ಟೊಂಕದಲ್ಲಿ ಮಾತನಾಡಿದ ಪ್ರಧಾನಿ, ನಾನು ಹೇಳುತ್ತಿದ್ದೇನೆ. ಇಮ್ರಾನ್ ಖಾನ್ ಅವರು ತಮ್ಮ ಮಾತುಗಳಿಗೆ ಬದ್ಧರಾಗಿರಬೇಕು. ಇವತ್ತು ಅವರ ಮಾತುಗಳನ್ನ ಒರೆಗೆ ಹಚ್ಚುವ ಸಮಯ ಬಂದಿದೆ ಎಂದು ಪಾಕ್ ಪ್ರಧಾನಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.
ನಮ್ಮ ಹೋರಾಟ ಏನಿದ್ದರು ಉಗ್ರವಾದದ ವಿರುದ್ಧ, ಮಾನವೀಯತೆಯ ವಿರೋಧಿಗಳ ವಿರುದ್ಧ ಮತ್ತು ಕಾಶ್ಮೀರದ ಉಳಿವಿಗಾಗಿ ನಮ್ಮ ಹೋರಾಟ ಎಂದರು. ಕಾಶ್ಮೀರಿಗಳ ವಿರುದ್ಧ ನಮ್ಮ ಹೋರಾಟ ಎಂದೂ ಇಲ್ಲ. ಕೆಲ ದಿನಗಳಿಂದ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಯುತ್ತಿದೆ. ಈ ರೀತಿ ದೌರ್ಜನ್ಯಗಳು ಸರಿಯಲ್ಲ. ಭಯೋತ್ಪಾದನೆ ವಿರುದ್ಧ ನಾವು ಹೋರಾಡಬೇಕೇ ಹೊರತು ಕಾಶ್ಮೀರಿ ವಿದ್ಯಾರ್ತ್ಥಿಗಳ ಮೇಲೆ ದಾಅಳಿಮಾಡುವುದಲ್ಲ ಎಂದರು.
ಪುಲ್ವಾದಲ್ಲಿ ದಾಳಿ ನಡೆದ 100 ಗಂಟೆಗಳಲ್ಲೇ ಉಗ್ರರ ಮಾಸ್ಟರ್ ಮೈಂಡ್ಗಳ ಮೇಲೆ ದಾಳಿ ನಡೆಸಿ ಮುಗಿಸಿಹಾಕಿದ್ದಾರೆ. ನಮ್ಮ ಸೈನಿಕರನ್ನ ಅಭಿನಂದಿಸುತ್ತೇನೆ ಎಂದು ಪ್ರಧಾನಿ ಹೇಳಿದರು.
PM Modi, Rally,Rajasthan,tonk