ಕೆ.ಎಲ್.ಇ ನಾಗರಬಾವಿ ಪದವಿ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳ

ಬೆಂಗಳೂರು: ಕೆ.ಎಲ್.ಇ ಸಂಸ್ಥೆಯ ನಾಗರಬಾವಿ ಪದವಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಬೃಹತ್ ಉದ್ಯೋಗ ಮೇಳದಲ್ಲಿ 57 ಕಂಪನಿಗಳು ಭಾಗವಹಿಸಿದ್ದವು.

ಇನ್ಫೋಸಿಸ್, ಚಕ್ರವರ್ತಿ ಕನ್ ಸ್ಟ್ರಕ್ಷನ್, ಸೆನ್ಸ್ ಟ್ಯಾಲೆಂಟ್ ಸೊಲ್ಯೂಶನ್, ಕಾನ್ಸೆಂಟ್ರಿಕ್ಸ್, ಮೆಕ್ ಟ್ರಾಮ್ ಕಂಪನಿ, ಜಸ್ಟ್ ಡೈಲ್, ಆಯಿಲ್ ಟೆಕ್ನಾಲಜೀಸ್ ಮೊದಲಾದ ಕಂಪನಿಗಳು ಭಾಗವಹಿಸಿದ್ದವು.

ಮೇಳದಲ್ಲಿ ಸಂದರ್ಶನಕ್ಕೆ ಹಾಜರಾದ 931 ಉದ್ಯೋಗಾಕಾಂಕ್ಷಿಗಳಲ್ಲಿ 731 ಅಭ್ಯರ್ಥಿಗಳು ಮೇಲ್ಕಾಣಿಸಿದ ಹೆಸರಾಂತ ಕಂಪನಿಗಳಿಗೆ ಆಯ್ಕೆಯಾಗಿದ್ದಾರೆ. ಆಯ್ಕೆಯಾದವರಲ್ಲಿ ವರ್ಷಕ್ಕೆ ಅತಿ ಹೆಚ್ಚು 6.5 ಲಕ್ಷ ಸಂಬಳ ಪಡೆಯುವವರಾಗಿದ್ದಾರೆ.

ಈ ಉದ್ಯೋಗ ಮೇಳವನ್ನು ಹೆಲ್ತ್ ಮೈಂಡ್ಸ್ ದ ಸಿ.ಇ.ಓ ಹಾಗೂ ನಿರ್ದೇಶಕರಾದ ಡಾ.ಚಿನ್ಮಯ ಚಿಗಟೇರಿ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಪ್ರಾಚಾರ್ಯ ಪ್ರೊ.ರಾಜೇಶ ಕೆ ವಹಿಸಿದ್ದರು.

ಬೃಹತ್ ಉದ್ಯೋಗ ಮೇಳ ಕುರಿತು ಭಾಗ್ಯವತಿ ಹರ್ಲಾಪುರ ವಿವರ ಮಾಹಿತಿ ನೀಡಿದರು. ಡಾ. ಆರ್ ಎಸ್ ಗುರೆಡ್ದಿ ಸ್ವಾಗತಿಸಿದರೆ, ಪ್ರೊ.ಕಿಶನ್ ಪಾಟೀಲ್ ಅತಿಥಿಗಳ ಪರಿಚಯ ಮಾಡಿದರು. ಪ್ರೊ.ವಿಜಯಕುಮಾರ್ ವಂದಿಸಿದರು.

KLE Degree College,Nagarbhavi,udyoga mela

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ