ನವದೆಹಲಿ: ಕರ್ನಾಟಕ ಹಾಗೂ ಗೋವಾ ಎನ್ಸಿಸಿ(ನ್ಯಾಷನಲ್ ಕೆಡೆಟ್ ಕೋರ್) ತಂಡಕ್ಕೆ ಈ ಬಾರಿ ಪ್ರತಿಷ್ಠಿತ ಗಣರಾಜ್ಯೋತ್ಸವ ‘ಪ್ರಧಾನಿ ಬ್ಯಾನರ್’ ಪ್ರಶಸ್ತಿ ಲಭಿಸಿದೆ.
ಗಣರಾಜ್ಯೋತ್ಸವದ ಪರೇಡ್ ಬಳಿಕ ನಡೆದ ಕಾರ್ಯಕ್ರಮದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಪ್ರದಾನ ಮಾಡಿದ್ದಾರೆ. ಎನ್ಸಿಸಿ ಸೇರುವ ಪ್ರತಿಯೊಬ್ಬ ಕೆಡೆಟ್ನ ಕನಸಿನ ಪ್ರಶಸ್ತಿ ಇದಾಗಿದೆ.
ತಮಿಳುನಾಡು, ಮಹಾರಾಷ್ಟ್ರ ಹಾಗೂ ಪಂಜಾಬ್ನ ಎನ್ಸಿಸಿ ತಂಡವನ್ನು ಹಿಂದಿಕ್ಕಿ ಕರ್ನಾಟಕ ಹಾಗೂ ಗೋವಾ ಕೆಡೆಟ್ಗಳು ಪ್ರಶಸ್ತಿ ಗಳಿಸಿದ್ದಾರೆ. ಗಣರಾಜ್ಯೋತ್ಸವದ ಪರೇಡ್ಗಾಗಿ ದೆಹಲಿಗೆ ಬಂದಿದ್ದ ಕೆಡೆಟ್ಗಳ ಒಂದು ತಿಂಗಳ ಪ್ರದರ್ಶನವನ್ನು ಆಧರಿಸಿ ಈ ಪ್ರಶಸ್ತಿ ನೀಡಲಾಗುತ್ತದೆ.
ಪರೇಡ್, ಡ್ರಿಲ್, ಫೈರಿಂಗ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಿ ಅಂಕ ನೀಡಲಾಗುತ್ತದೆ. ಇದರ ಜತೆಗೆ ಈ ಕೆಡೆಟ್ ತಂಡ ಕಳೆದೊಂದು ವರ್ಷದ ಸಮುದ್ರ ಪ್ರಯಾಣ, ವಿಮಾನ ಹಾರಾಟ, ಶಿಖರಾರೋಹಣ ಹಾಗೂ ಇತರ ಸಾಹಸ ಪ್ರದರ್ಶನಗಳನ್ನು ಕೂಡ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ಕರ್ನಾಟಕದಲ್ಲಿ ಒಟ್ಟು 973 ಶಿಕ್ಷಣ ಸಂಸ್ಥೆಗಳಿಂದ 70,335 ಕೆಡೆಟ್ಗಳು ಎನ್ಸಿಸಿ ಸೇರಿದ್ದರು. ಬೆಂಗಳೂರು, ಬೆಳಗಾವಿ, ಮೈಸೂರು, ಮಂಗಳೂರು ಹಾಗೂ ಬಳ್ಳಾರಿ ವಿಭಾಗದ ವಿದ್ಯಾರ್ಥಿಗಳು ಈ ತಂಡದಲ್ಲಿದ್ದಾರೆ. ಇವರಲ್ಲಿ 106 ಕೆಡೆಟ್ಗಳನ್ನು ಆಯ್ಕೆ ಮಾಡಿ ಗಣರಾಜ್ಯೋತ್ಸವದ ಪರೇಡ್ ತಂಡಕ್ಕೆ ಕಳುಹಿಸಲಾಗಿತ್ತು.
ಪ್ರಶಸ್ತಿ ಪಡೆಯವಾಗ ಉಪನಿರ್ದೇಶಕರ ಜತೆಗೆ ಮಾರ್ಚ್ ಮಾಡಿದ ಕೆಡೆಟ್ ಚಂದನಾ ಕರ್ನಾಟಕದ ಮೈಸೂರಿನವಳು. ಇವಳು ಟೀ ಮಾರಾಟ ಮಾಡುವವರ ಪುತ್ರಿ ಎಂಬುದು ವಿಶೇಷ.
Karnataka,Goa, NCC Team, Prime Minister’s banner awarded