ರಾಜಕೀಯ ಪ್ರಹಸನಕ್ಕೆ ಇಂದು ತೆರೆ: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ

ಬೆಂಗಳೂರು, ಜು.26- ಒಂದು ವಾರದಿಂದ ನಡೆದ ರಾಜಕೀಯ ಪ್ರಹಸನಕ್ಕೆ ಇಂದು ತೆರೆ ಬಿದ್ದಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ನಡೆದ ಬಿಜೆಪಿ ಸರ್ಕಾರದ ಸಾಧನೆಯ ಎರಡನೆ ವರ್ಷದ ಸಮಾವೇಶದ ಸಂದರ್ಭದಲ್ಲಿ ಭಾವುಕ ಭಾಷಣ ಮಾಡಿದ ಯಡಿಯೂರಪ್ಪ ಅವರು ಅಂತಿಮವಾಗಿ ರಾಜೀನಾಮೆ ನೀಡುವುದಾಗಿ ಘೋಷಿಸಿದರು.

ತಾವು ನಡೆದು ಬಂದ ಹಾದಿಯನ್ನು ಮೆಲುಕು ಹಾಕಿದ ಅವರು ತನ್ನ ಎರಡು ವರ್ಷದ ಅವಧಿಯಲ್ಲಿ ಸಹಕಾರ ನೀಡಿದ ಎಲ್ಲಾ ಸಹೋದ್ಯೋಗಿ ಸಚಿವರುಗಳಿಗೆ , ಅಧಿಕಾರಿ ವರ್ಗಕ್ಕೆ ಧನ್ಯವಾದ ಅರ್ಪಿಸಿದರು.

ನನ್ನ ಜೀವನವನ್ನೇ ರಾಜ್ಯದ ಜನತೆಗಾಗಿ ಮುಡುಪಾಗಿಟ್ಟು ಕೆಲಸ ಮಾಡಿದ್ದೇನೆ ಎಂಬ ತೃಪ್ತಿ ಮತ್ತು ಸಮಾಧಾನವಿದೆ. ಮುಂದೆಯೂ ಕೂಡ ನನ್ನ ಉಸಿರು ಇರುವವರೆಗೂ ಮಾಡುತ್ತೇನೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ