ಉಪಚುನಾವಣೆ ಫಲಿತಾಂಶ ಪ್ರಕಟ: ಮೈತ್ರಿ ಪಕ್ಷಕ್ಕೆ ಗೆಲುವು; ಬಿಜೆಪಿಗೆ ಹಿನ್ನಡೆ: ಅಂಕಿ-ಅಂಶಗಳ ಮಾಹಿತಿ

ಬೆಂಗಳೂರು: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ರಾಜ್ಯದ ಮೂರು ಲೋಕಸಭೆ ಮತ್ತು ಎರಡು ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳಿಗೆ ಗೆಲುವು ಸಿಕ್ಕಿದ್ದು, ಶಿವಮೊಗ್ಗದಲ್ಲಿ ಮಾತ್ರ ಬಿಜೆಪಿ ಜಯಗಳಿಸಿದ್ದು, ಉಳಿದಂತೆ ಕಮಲ ಪಕ್ಷಕ್ಕೆ ಮುಖಭಂಗವಾಗಿದೆ.

ಬೆಳಿಗ್ಗೆ 8 ಗಂಟೆಯಿಂದಲೇ ಮತ ಎಣಿಕೆ ಆರಂಭವಾಗಿದ್ದು ಈಗಾಗಲೇ ಫಲಿತಾಂಶ ಬಹುತೇಕ ಹೊರಹೊಮ್ಮಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ.

ಮಂಡ್ಯ ಲೋಕಸಭಾ:

ಮಂಡ್ಯ ಉಪಚುನಾವಣೆ ಫಲಿತಾಂಶ ಹೊರಬಂದಿದ್ದು, ಜೆಡಿಎಸ್‌ನ ಶಿವರಾಮೇಗೌಡ 3,24,925 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಮತಗಳ ವಿವರ:
ಜೆಡಿಎಸ್ (ಶಿವರಾಮೇಗೌಡ)- 569302
ಬಿಜೆಪಿ (ಸಿದ್ದರಾಮಯ್ಯ)- 244377
ಹೊನ್ನೇಗೌಡ- 17842
ನೋಟಾ-15478
ನವೀನ್ ಕುಮಾರ್- 15305
ಕೌಡ್ಲೆ ಚನ್ನಪ್ಪ-9094
ರಾಜಣ್ಣ-7421
ಶಂಭುಲಿಂಗೇಗೌಡ-5483
ಬಿ.ಎಸ್.ಗೌಡ-4086
ನಂದೀಶ್- 4064
ಚಲಾವಣೆಯಾದ ಒಟ್ಟು ಮತ-892452

ಬಳ್ಳಾರಿ ಲೋಕಸಭೆ:
ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ವಿರುದ್ಧ ಕಾಂಗ್ರೆಸ್‌ನ ವಿ.ಎಸ್ ಉಗ್ರಪ್ಪ ಗೆಲುವು ಸಾಧಿಸಿದ್ದು, 588863 ಮತಗಳಿಂಗ ವಿಜಯ ಸಾಧಿಸಿದ್ದಾರೆ.

ಜೆ ಶಾಂತಾ- 360608 ಮತಗಳನ್ನು ಪಡೆದಿದ್ದು, , ಕಾಂಗ್ರೆಸ್ 228255 ಮತಗಳಿಂದ ಮುನ್ನಡೆ ಸಾಧಿಸಿದೆ.

ಶಿವಮೊಗ್ಗ ಲೋಕಸಭೆ:
ಶಿವಮೊಗ್ಗದಲ್ಲಿ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ವಿರುದ್ಧ ಬಿಜೆಪಿಯ ಬಿ.ವೈ ರಾಘವೇಂದ್ರ 52148 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ರಾಘವೇಂದ್ರ ಅವರಿಗೆ ದೊರೆತ ಮತ- 543306.
ಜೆಡಿಎಸ್ ಅಭ್ಯರ್ಥಿಗೆ ದೊರೆತ ಮತ – 491158.
ಜೆಡಿಯು ಅಭ್ಯರ್ಥಿ ಮಹಿಮಾ ಜೆಡಿಯು ಅಭ್ಯರ್ಥಿ ಮಹಿಮಾ ಪಟೇಲ್ ಪಡೆದ ಮತಗಳು- 8713
ಸ್ವತಂತ್ರ ಅಭ್ಯರ್ಥಿ ಶಶಿಕುಮಾರ್‌ ಪಡೆದ ಮತಗಳು- 17189
ನೋಟಾ ಮತಗಳು: 10687

ರಾಮನಗರ ವಿಧಾನಸಭೆ:
ರಾಮನಗರ ವಿಧಾನಸಭೆ ಕ್ಷೇತ್ರದಅಂತಿಮ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಜೆಡಿಎಸ್‌ ಅಭ್ಯರ್ಥಿ ಅನಿತಾ ಕುಮಾರಸ್ವಾಮಿಗೆ 1,09,137 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ.
.
ಅನಿತಾ ಕುಮಾರಸ್ವಾಮಿ (ಜೆಡಿಎಸ್‌); 1,25,043
ಎಲ್‌. ಚಂದ್ರಶೇಖರ್ (ಬಿಜೆಪಿ): 15906
ಎಚ್‌.ಡಿ. ರೇವಣ್ಣ (ಪೂರ್ವಾಂಚಲ ಮಹಾಪಂಚಾಯತ್‌): 2231
ಪಕ್ಷೇತರರು
ಕುಮಾರ ನಾಯ್ಕ: 520
ಡಿ.ಎಂ. ಮಾದೇಗೌಡ: 536
ಮುನಿಯಾ ಬೋವಿ: 478
ಬಿ.ಪಿ. ಸುರೇಂದ್ರ: 545
ನೋಟಾ ಚಲಾವಣೆ: 2909
ಒಟ್ಟು ಚಲಾವಣೆಗೊಂಡ ಮತಗಳು: 1,48,168.

ಜಮಖಂಡಿ ವಿಧಾನಸಭೆ:
ಜಮಖಂಡಿ ವಿಧಾನಸಭಾ ಉಪ‌ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ ಗೆಲುವು ಸಾಧಿಸಿದ್ದಾರೆ. 39,476 ಮತಗಳಿಂದ ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿಯವರನ್ನು ಆನಂದ ನ್ಯಾಮಗೌಡ ಸೋಲಿಸಿದ್ದಾರೆ.

ಆನಂದ ನ್ಯಾಮಗೌಡ 96, 968 ಮತಗಳನ್ನು ಪಡೆದಿದ್ದರೆ, ಶ್ರೀಕಾಂತ ಕುಲಕರ್ಣಿ 57, 492 ಮತ ಪಡೆದು ಪರಾಭವಗೊಂಡಿದ್ದಾರೆ.

Karnataka,By electiona,Result

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ