ಭಾರತ ಮತ್ತೊಮ್ಮೆ ಗೆಲ್ಲುತ್ತಿದೆ ಎಂದ ಪ್ರಧಾನಿ ಮೋದಿ

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ಮತ ಎಣಿಕೆ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಎನ್ ಡಿಎ 346 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ ಬಿಜೆಪಿ ಒಂದೇ ಪಕ್ಷ 292 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಕಳೆದ ಬಾರಿಯಂತೆ ಸ್ವತಂತ್ರವಾಗಿ, ಯಾವುದೇ ಬೆಂಬಲ ಇಲ್ಲದೇ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡುವತ್ತ ಹೆಜ್ಜೆ ಹಾಕಿದೆ.

ಕಾಂಗ್ರೆಸ್ ಪಕ್ಷ ಕೇವಲ 60 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಇನ್ನು ಇತರರು 147 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದಾರೆ.

ಈ ನಡುವೆ ಪಕ್ಷದ ಗೆಲುವಿನ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಭಾರತ ಮತ್ತೊಮ್ಮೆ ಗೆಲ್ಲುತ್ತಿದೆ ಎಂದಿದ್ದಾರೆ.

ಸಬ್​ ಕಾ ಸಾಥ್​, ಸಬ್​ ಕಾ ವಿಕಾಸ್​ ಎಂದು ಪ್ರಾರಂಭದಲ್ಲಿ ಬರೆದ ಮೋದಿಯವರು, ನಾವೆಲ್ಲರೂ ಜತೆಯಾಗಿ ಬೆಳೆಯೋಣ, ಒಟ್ಟಾಗಿ ಏಳ್ಗೆ ಹೊಂದೋಣ, ಎಲ್ಲರೂ ಜತೆಯಾಗಿ ಸೇರಿ ದೇಶವನ್ನು ಬಲಿಷ್ಠಗೊಳಿಸೋಣ ಎಂದು ಹೇಳಿದ್ದಾರೆ.

Lok sabha election, result,PM Modi,tweet

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ