ಜ.31ರಿಂದ ಸಂಸತ್ ಬಜೆಟ್ ಅಧಿವೇಶನ: ಫೆ.1ರಂದು ಕೇಂದ್ರದ ಮಧ್ಯಂತರ ಬಜೆಟ್‌

ನವದೆಹಲಿ: ಜನವರಿ 31 ರಿಂದ ಫೆಬ್ರವರಿ 13 ರ ವರೆಗೆ ಸಂಸತ್‌ನ ಬಜೆಟ್‌ ಅಧಿವೇಶನ ನಡೆಯಲಿದ್ದು, ಫೆಬ್ರವರಿ 1 ರಂದು ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್‌ ಮಂಡನೆ ಮಾಡಲಿದೆ.

ಈ ಕುರಿತು ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದ್ದು, ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಫೆ.1ರಂದು ಮಧ್ಯಂತರ ಬಜೆಟ್ ಮಂಡನೆ ಮಾಡಲಿದ್ದಾರೆ. ಇದು ಅವರು ಮಂಡಿಸುತ್ತಿರುವ 6 ನೇ ಬಜೆಟ್‌ ಆಗಿದೆ.

ಹಣಕಾಸು ಸಚಿವಾಲಯ ಬಜೆಟ್‌ ಭಾಷಣಕ್ಕಾಗಿ ಈಗಾಗಲೆ ವಿವಿಧ ಸಚಿವಾಲಯಗಳಿಂದ ವಿವಿಧ ಅಭಿಪ್ರಾಯಗಳನ್ನು ಪಡೆದುಕೊಂಡಿದೆ.

2019 ರ ಸಾರ್ವತ್ರಿಕ ಚುನಾವಣೆಗೂ ಮುನ್ನ ನಡೆಯುವ ಈ ಬಜೆಟ್‌ ಅಧಿವೇಶ ಎನ್‌ಡಿಎ ಸರ್ಕಾರಕ್ಕೆ ಮಹತ್ವದ ಅಧಿವೇಶನ ಎನಿಸಿಕೊಂಡಿದೆ.

Budget Session from January 31 to February 13, Interim Budget on February 1

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ