ರಫೇಲ್ ಡೀಲ್ ವಿವಾದ ಕುರಿತ ಸುಪ್ರೀಂ ತೀರ್ಪಿ ಅಸಮ್ಮತ: ಮರುಪರಿಶೀಲನಾ ಅರ್ಜಿಗೆ ನಿರ್ಧಾರ: ಪ್ರಶಾಂತ್ ಭೂಷಣ್

ನವದೆಹಲಿ: ರಫೇಲ್​ ಡೀಲ್​ ಕುರಿತು ಸುಪ್ರೀಂ ಕೋರ್ಟ್​ ನೀಡಿರುವ ತೀರ್ಪು ಒಪ್ಪುವಂಥದ್ದಲ್ಲ. ಈ ಕುರಿತು ಮರು ಪರಿಶೀಲನಾ ಅರ್ಜಿ ಸಲ್ಲಿಸುವುದಾಗಿ ಅರ್ಜಿದಾರ, ಖ್ಯಾತ ವಕೀಲ ಪ್ರಶಾಂತ್​ ಭೂಷಣ್​ ಹೇಳಿದ್ದಾರೆ.

ರಫೇಲ್​ ಯುದ್ಧ ವಿಮಾನಗಳ ಖರೀದಿಯಲ್ಲಿ ಭಾರಿ ಅಕ್ರಮವಾಗಿದ್ದು ನ್ಯಾಯಾಲಯ ಉಸ್ತುವಾರಿಯಲ್ಲಿ ತನಿಖೆಗೆ ಅವಕಾಶ ಮಾಡಿಕೊಡಬೇಕು ಎಂದು ಸಲ್ಲಿಕೆಯಾಗಿದ್ದ ಎಲ್ಲ ಅರ್ಜಿಗಳನ್ನೂ ಸುಪ್ರೀಂಕೋರ್ಟ್​ ವಜಾಗೊಳಿಸಿರುವ ಸುಪ್ರೀಂ ಕೋರ್ಟ್, ಒಪ್ಪಂದದ ಕುರಿತು ತನಿಖೆಯ ಅಗತ್ಯವಿಲ್ಲ ಎಂದು ತೀರ್ಪು ನೀಡಿತ್ತು. ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಶಾಂತ್ ಭೂಷಣ್, ನನ್ನ ಪ್ರಕಾರ ಸುಪ್ರೀಂಕೋರ್ಟ್​ನ ತೀರ್ಪು ಸಂಪೂರ್ಣ ತಪ್ಪು. ಇದರ ವಿರುದ್ಧದ ಹೋರಾಟವನ್ನು ನಿಲ್ಲಿಸುವುದೂ ಇಲ್ಲ. ತೀರ್ಪನ್ನು ಪ್ರಶ್ನಿಸಿ ಮರುಪರಿಶೀಲನಾ ಅರ್ಜಿ ಸಲ್ಲಿಸುವ ಕುರಿತು ಶೀಘ್ರದಲ್ಲೇ ನಿರ್ಧರಿಸಲಾಗುವುದು ಎಂದು ಹೇಳಿದರು.

ಈ ನಡುವೆ ಕೋರ್ಟ್​ ತೀರ್ಪಿನ ಕುರಿತು ಮಾತನಾಡಿರುವ ತೃಣಮೂಲ ಕಾಂಗ್ರೆಸ್​ನ ಹಿರಿಯ ನಾಯಕ ಸುಗತ ರಾಯ್​, ಸುಪ್ರೀಂ ಕೋರ್ಟ್​ನ ಅಭಿಪ್ರಾಯ ಸರಿ. ಆದರೆ, ರಫೇಲ್​ ಡೀಲ್​ ಅನ್ನು ಜಂಟಿ ಸಂಸದೀಯ ಸಮಿತಿ ತನಿಖೆಗೆ ಒಪ್ಪಿಸಲು ಪ್ರತಿಪಕ್ಷಗಳು ಒತ್ತಾಯಿಸಬಹುದು ಎಂದು ಹೇಳಿದ್ದಾರೆ.

ಇದೇ ವೇಳೆ ತೀರ್ಪಿನ ಕುರಿತು ಮಾತನಾಡಿರುವ ಕೇಂದ್ರ ಗೃಹ ಸಚಿವ ರಾಜನಾಥ್​ ಸಿಂಗ್​. ” ತೀರ್ಪು ಸ್ಪಷ್ಟವಾಗಿದೆ. ಕಾಂಗ್ರೆಸ್ ಮಾಡುತ್ತಿರುವ ಆರೋಪಗಳು ನಿರಾಧಾರ ಮತ್ತು ರಾಜಕೀಯವಾಗಿ ಲಾಭ ಪಡೆಯುವ ಉದ್ದೇಶದ್ದು ಎಂದು ನಾವು ಮೊದಲಿನಿಂದಲೂ ಹೇಳುತ್ತಲೇ ಇದ್ದೇವೆ ಎಂದು ತಿಳಿಸಿದ್ದಾರೆ.

Rafale deal,Supreme court,Prashant Bhushan,Rajnath singh

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ