ವಿಮಾಣ ನಿಲ್ದಾಣದಲ್ಲಿ ಒಂದೂವರೆ ಗಂಟೆ ಕಾಯ್ದು ಸಿದ್ದರಾಮಯ್ಯ

ಬೆಳಗಾವಿ: ಬಾದಾಮಿ ಮತಕ್ಷೇತ್ರದ ಜನರ ಆಹ್ವಾಲು ಸ್ವೀಕರಿಸಲು ಬೆಂಗಳೂರಿನಿಂದ ಆಗಮಿಸಿದ ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇನ್ಸುಲಿನ್ ಮರೆತು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಒಂದೂವರೆ ಗಂಟೆ ಕಾಯ್ದು ಕುಳಿತ ಘಟನೆ ಸೋಮವಾರ ನಡೆಯಿತು.
ಕಂದಾಯ ಸಚಿವ ಆರ್. ಅಶೋಕ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಬೆಂಗಳೂರಿನಿಂದ ಬೆಳಗಾವಿಯವರೆಗೂ ಒಂದೇ ವಿಮಾನಲ್ಲಿ ಆಗಮಿಸಿದರು. ಕಂದಾಯ ಸಚಿವ ಮಳೆಯಿಂದ ಹಾನಿಯಾದ ಬೆಳಗಾವಿ ಪ್ರದೇಶಕ್ಕೆ ಭೇಟಿ ನೀಡಲು ಸಾಂಬ್ರಾ ವಿಮಾನ ನಿಲ್ದಾಣದಿಂದ ತೆರಳಿದರು. ಆದರೆ, ವಿಪಕ್ಷ ನಾಯಕ ಸಿದ್ದರಾಮಯ್ಯ ಇನ್ಸುಲಿನ್ ಮರೆತು ಬಂದಿದ್ದ ಹಿನ್ನೆಲೆಯಲ್ಲಿ ಅದನ್ನು ತರುವವರೆಗೂ ವಿಮಾಣ ನಿಲ್ದಾಣದಲ್ಲಿಯೇ ಕಾಲ ಕಳೆಯುವಂತಾಯಿತು.
ಇದರ ಮಧ್ಯೆ ರಾಮದುರ್ಗದ ಮಾಜಿ ಶಾಸಕ ಅಶೋಕ ಪಟ್ಟಣ ಇನ್ಸುಲಿನ್ ಎಲ್ಲರೂ ತೆಗೆದುಕೊಳ್ಳುತ್ತಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಗ್ಯವಾಗಿದ್ದಾರೆ. ಅವರು ಕುಸ್ತಿ ಆಡಿ ಅಂದರೂ ಆಡುತ್ತಾರೆ. ಯಾವುದೇ ಸಮಸ್ಯೆ ಇಲ್ಲ ಎಂದು ಪಟ್ಟಣ ಅವರ ಕಾರು ಚಾಲಕರ ಮೂಲಕ ಸಿದ್ದರಾಮಯ್ಯನವರಿಗೆ ಇನ್ಸುಲಿನ್ ತರಲು ಹೇಳಿದರು. ಇನ್ಸುಲಿನ್ ಬಂದ ಬಳಿಕ ಸಾಂಬ್ರಾ ವಿಮಾನ ನಿಲ್ದಾಣದಿಂದ ಸಿದ್ದರಾಮಯ್ಯ ಹೊರ ಬಂದರು.
ನಾನು ಆರಾಮವಾಗಿಯೇ ಇದ್ದೇನಿ. ನಾನು ಡಯಾಬಿಟಿಕ್ ಇನ್ಸುಲಿನ್ ತೆಗೆದುಕೊಳ್ಳಬೇಕಿತ್ತು. ಬ್ರೆಕ್ ಫಾಸ್ಟ್‍ಗಿಂತ ಮುಂಚೆಯೇ ತೆಗೆದುಕೊಳ್ಳಬೇಕಿತ್ತು. ಅದನ್ನು ಮನೆಯಲ್ಲಿ ತೆಗೆದುಕೊಳ್ಳಲೇ ಇಲ್ಲ. ಅದಕ್ಕೆ ಇಲ್ಲಿ ತರಸೋಕೆ ಕಳಸಿದ್ದೆ. ಅವರು ಕೊಟ್ಟಿದ್ದರು. ಪೆನ್ಸಿಲೇ ಕೊಟ್ಟಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ