ಛತ್ತೀಸ್ ಗಢದಲ್ಲಿ ಮತ್ತೆ ನಕ್ಸಲ್ ಅಟ್ಟಹಾಸ; ಬಾಂಬ್ ದಾಳಿ: ಓರ್ವ ಯೋಧ ಗಾಯ, ಓರ್ವ ನಕ್ಸಲ್ ಸಾವು

ರಾಯ್ ಪುರ: ವಿಧಾನಸಭಾ ಚುನಾವಣೆಗೆ ಒಂದು ದಿನ ಬಾಕಿ ಇರುವ ಚತ್ತೀಸ್ ಗಢದಲ್ಲಿ ನಕ್ಸಲರು ಮತ್ತೆ ಅಟ್ಟ ಹಾಸ ಮೆರೆದಿದ್ದಾರೆ. ಛತ್ತೀಸ್ ಗಢದ ಅಂತಗರ್ ಗ್ರಾಮದ ಬಳಿ ನಕ್ಸಲರು ದಾಳಿ ನಡೆಸಿದ್ದು, 7 ಬಾಂಬ್ ಗಳನ್ನು ಸ್ಫೋಟಿಸಿದ್ದಾರೆ.
,
ಗಸ್ತು ಕರ್ತವ್ಯಕ್ಕೆ ತೆರಳಿದ್ದ ಬಿಎಸ್ಎಫ್ ಪಡೆಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ. ಈ ವೇಳೆ ನಕ್ಸಲರ ವಿರುದ್ಧ ಭದ್ರತಾ ಪಡೆಗಳು ಎನ್’ಕೌಂಟರ್ ಕಾರ್ಯಾಚರಣೆ ಕೈಗೊಂಡಿದ್ದು ಓರ್ವ ನಕ್ಸಲ್ ಸಾವನ್ನಪ್ಪಿದ್ದಾನೆ.

ಇನ್ನು ನಕ್ಸಲರು ಮತ್ತು ಭದ್ರತಾಪಡೆಗಳ ನಡುವಿನ ಗುಂದಿನ ಚಕಮಕಿಯಲ್ಲಿ ಓರ್ವ ಬಿಎಸ್ಎಫ್ ಯೋಧ ಗಾಯಗೊಂಡಿದ್ದು ಪ್ರಸ್ತುತ ಸ್ಥಳದಲ್ಲಿ ಯೋಧರು ಹಾಗೂ ನಕ್ಸಲರ ನಡುವೆ ಭಾರೀ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ತಿಳಿದುಬಂದಿದೆ.

Chhattisgarh, Naxal attack,antagar

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ