ಛತ್ತೀಸ್‌ಘಡದ ಮುಖ್ಯಮಂತ್ರಿಯಾಗಿ ಭೂಪೇಶ್‌ ಬಘೇಲ್‌ ಆಯ್ಕೆ

ರಾಯ್ ಪುರ: ಛತ್ತೀಸ್‌ಘಡದ ನೂತನ ಮುಖ್ಯಮಂತ್ರಿಯನ್ನಾಗಿ ಭೂಪೇಶ್‌ ಬಘೇಲ್‌ ಅವರನ್ನು ಕಾಂಗ್ರೆಸ್ ನಾಯಕರು ಆಯ್ಕೆ ಮಾಡಿದ್ದಾರೆ. ಈ ಮೂಲಕ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಢ ಮೂರು ರಾಜ್ಯಗಳನ್ನು ಗೆದ್ದಿದ್ದ ಕಾಂಗ್ರೆಸ್ ಗೆ ಮುಖ್ಯಮಂತ್ರಿಗಳ ಆಯ್ಕೆ ಒಂದು ಸವಾಲಾಗಿ ಪರಿಣಮಿಸಿತ್ತು. ಈಗ ಅಂತಿಮವಾಗಿ ಛತ್ತೀಸ್ ಗಡ ಸಿಎಂ ಆಯ್ಕೆಯೊಂದಿಗೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಆಯ್ಕೆ ಕಸರತ್ತಿಗೆ ತೆರೆ ಬಿದ್ದಂತಾಗಿದೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ದೆಹಲಿಯ ನಿವಾಸದಲ್ಲಿ ನಿನ್ನೆ ನಾಲ್ಕು ಮುಖಂಡರೊಂದಿಗೆ ಚರ್ಚೆ ನಡೆಸಿದ್ದರು. ಕಾಂಗ್ರೆಸ್ ಕೇಂದ್ರೀಯ ವೀಕ್ಷಕ ಮಲ್ಲಿಕಾರ್ಜುನ ಖರ್ಗೆ ಮತ್ತು ಛತ್ತೀಸ್ ಗಡ್ ಉಸ್ತುವಾರಿ ಪಿ.ಪಿ. ಪುನಿಯಾ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಸಹಿತ ಸಭೆಯಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ನಡೆಸಿದ ಬಳಿಕ ಸರ್ವಾನುಮತದಿಂದ ಬಘೇಲ್‌ ಅವರನ್ನು ಸಿಎಂ ಆಗಿ ಆಯ್ಕೆ ಮಾಡಲಾಗಿತ್ತು.

ಇಂದು ಈಗ ರಾಯಪುರ್ ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಮಲ್ಲಿಕಾರ್ಜುನ್ ಖರ್ಗೆ ಮತ್ತು ಪಿಎಲ್ ಪುನಿಯಾ ಜಿ ಅವರ ಸಮ್ಮುಖದಲ್ಲಿ ಭೂಪೇಶ್ ಬಾಘೇಲ್ ರನ್ನು ಛತ್ತೀಸ್ ಗಡ್ ನೂತನ ಮುಖ್ಯಮಂತ್ರಿಯಾಗಿ ಘೋಷಿಸಲಾಯಿತು. ನಾಳೆ ಭೂಪೇಶ್ ಅವರು ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇನ್ನು ಮುಖ್ಯಮಂತ್ರಿ ಹುದ್ದೆಗೆ ಬಘೇಲ್‌ ಅವರಿಗೆ ಟಿ.ಎಸ್‌.ಸಿಂಗ್‌ ದೇವ್‌, ಚರಣ ದಾಸ್‌ ಮಹಾಂತ್‌, ತಾಮ್ರಧ್ವಜ ಸಾಹೂ ಅವರು ಸ್ಪರ್ಧಿಗಳಾಗಿದ್ದರು.

57 ವರ್ಷದ ಬಘೇಲ್‌ ಯುವ ಕಾಂಗ್ರೆಸ್‌ ಕಾರ್ಯಕರ್ತರಾಗಿ ರಾಜಕೀಯ ಆರಂಭಿಸಿದ್ದರು. ಛತ್ತೀಸ್‌ಗಢ ವಿಭಜನೆಗೂ ಮುನ್ನ ಮಧ್ಯಪ್ರದೇಶದಲ್ಲಿ ಶಾಸಕರಾಗಿದ್ದ ಬಘೇಲ್‌ ಅವರು ದಿಗ್ವಿಜಯ್‌ ಸಿಂಗ್‌ ಅವರ ಸಂಪುಟದಲ್ಲಿ ಸಚಿವರಾಗಿದ್ದರು.

2004 ಮತ್ತು 2009 ರಲ್ಲಿ ಎರಡು ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಥಿಸಿ ಸೋಲನ್ನೂ ಅನುಭವಿಸಿದ್ದರು. ಈ ಬಾರಿ ಚುನಾವಣೆಯಲ್ಲಿ ಪಾಟನ್‌ ಕ್ಷೇತ್ರದಲ್ಲಿ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿದ್ದರು.

Chhattisgarh, Chief Minister Bhupesh Baghel, Will Take Oath Tomorrow

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ