ಛತ್ತೀಸ್ ಗಢದ ಕಂಕೇರ್ ನಲ್ಲಿ ನಕ್ಸಲ್ ದಾಳಿಗೆ ನಾಲ್ವರು ಯೋಧರು ಬಲಿ

ಕಂಕೇರ್‌: ಛತ್ತೀಸ್‌ಗಢದ ಕಂಕೇರ್‌ನಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದು, ನಾಲ್ವರು ಬಿಎಸ್‌ಎಫ್‌ ಯೋಧರು ಹುತಾತ್ಮರಾಗಿದ್ದಾರೆ.

ಬಸ್ತಾರ್‌ ಪ್ರಾಂತ್ಯದ ಕಂಕೇರ್‌ ಜಿಲ್ಲೆಯ ಮಹಾಲ ಅರಣ್ಯ ಪ್ರದೇಶದಲ್ಲಿ ನಕ್ಸಲರು ಗಸ್ತು ತಿರುಗುತ್ತಿದ್ದ ಬಿಎಸ್‌ಎಫ್‌ ಯೋಧರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದರು. ಸ್ಥಳದಲ್ಲೇ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.

ಗುಂಡಿನ ದಾಳಿಯಲ್ಲಿ ಓರ್ವ ಹಿರಿಯ ಅಧಿಕಾರಿ, ಮೂವರು ಕಾನ್‌ಸ್ಟೇಬಲ್‌ ಮೃತಪಟ್ಟಿದ್ದಾರೆ ಎಂದು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಕಿರಣ್‌ ರಾಥೋಡ್‌ ಮಾಹಿತಿ ನೀಡಿದ್ದಾರೆ.

ಹಲವಾರು ಯೋಧರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚುನಾವಣೆಯನ್ನು ಬಹಿಷ್ಕರಿಸಬೇಕು ಎಂದು ಮಾವೋವಾದಿಗಳು ಇತ್ತೀಚೆಗೆ ಕರಪತ್ರಗಳನ್ನು ಹಂಚಿದ್ದರು. ಬಸ್ತಾರ್‌ ಮತ್ತು ಕಂಕೇರ್‌ ಪ್ರಾಂತ್ಯಗಳಲ್ಲಿ ನಕ್ಸಲರು ಚುನಾವಣೆಯಲ್ಲಿ ಯಾರೂ ಮತದಾನ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಬಸ್ತಾರ್‌ ಮತ್ತು ಕಂಕೇರ್‌ ಪ್ರಾಂತ್ಯಗಳಲ್ಲಿ ನಕ್ಸಲರು ಹೆಚ್ಚು ಸಂಖ್ಯೆಯಲ್ಲಿ ಇರುವ ಕಾರಣ ಹೆಚ್ಚುವರಿ ಸೇನಾ ತುಕಡಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ಸೇನಾ ಪಡೆ ವಕ್ತಾರರು ಮಾಹಿತಿ ನೀಡಿದ್ದಾರೆ.

Four BSF jawans martyred in encounter with Maoists at Kanker, Chhattisgarh

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ