ಛತ್ತೀಸ್ ಗಢ ದಾಂತೇವಾಡದಲ್ಲಿ ನಕ್ಸಲರಿಂದ ಐಇಡಿ ಸ್ಫೋತ: ಬಿಜೆಪಿ ಶಾಸಕ ಸೇರಿ ಐವರ ಹತ್ಯೆ

ದಾಂತೇ ವಾಡ: ಛತ್ತೀಸ್ ಗಢದ ದಾಂತೇವಾಡದಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದಾರೆ. ಬುಲೆಟ್ ಪ್ರೂಫ್ ವಾಹನದ ಮೇಲೆಯೇ ಐಇಡಿ ಸ್ಫೋಟಿಸಿದ ನಕ್ಸಲರು ಬಿಜೆಪಿ ಶಾಸಕ ಹಾಗೂ ನಾಲ್ವರು ಭದ್ರತಾ ಸಿಬ್ಬಂದಿಯನ್ನು ಹತ್ಯೆಗೈದಿದ್ದಾರೆ.

ದಾಂತೇವಾಡದಲ್ಲಿ ಬಿಜೆಪಿ ರ್ಯಾಲಿಯನ್ನು ಗುರಿಯಾಗಿಸಿಕೊಂಡು ನಕ್ಸಲರು ಈ ದಾಳಿ ನಡೆಸಿದ್ದಾರೆ. ಬಿಜೆಪಿ ಶಾಸಕ ಭೀಮ ಮಾಂಡವಿ ಅವರ ಬುಲೆಟ್ ಫ್ರೂಫ್ ವಾಹನವನ್ನು ನಕ್ಸಲರು ಐಇಡಿ ಮೂಲಕ ಸ್ಫೋಟಿಸಿದ್ದಾರೆ.

ಘಟನೆಯಲ್ಲಿ ಬಿಜೆಪಿ ಶಾಸಕ ಭೀಮ ಮಾಂಡವಿ ಸಾವನ್ನಪ್ಪಿದ್ದಾರೆ ಅಲ್ಲದೇ. ಸ್ಥಳದಲ್ಲಿದ್ದ ನಾಲ್ವರು ಭದ್ರತಾ ಸಿಬ್ಬಂದಿ ಕೂಡ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

chhattisgarh,dantewada,naxal attack,BJP MLA dead

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ