ಪ್ರಧಾನಿ ಮೋದಿ ಜಾತಕ ವಿಶ್ವದಲ್ಲೇ ಶ್ರೇಷ್ಠ ಜಾತಕ; ನಟ ಜಗ್ಗೇಶ್

ಬೆಂಗಳೂರು: ಈ ಹಿಂದೆಯೇ ನಾನು ಲೋಕಸಭಾ ಚುನಾವಣಾ ಫಲಿತಾಂಶದ ಬಗ್ಗೆ ಹೇಳಿದ್ದೆ. ಪ್ರಧಾನಿ ನರೇಂದ್ರ ಮೋದಿಯವರ ಜಾತಕವನ್ನು ನಾನು ನೋಡಿದ್ದೇನೆ. ಮೋದಿಯ ಜಾತಕ ವಿಶ್ವದಲ್ಲೇ ಶ್ರೇಷ್ಠವಾದದ್ದು ಎಂಬುದು ಗೊತ್ತಾಯಿತು ಎಂದು ನಟ, ಬಿಜೆಪಿ ನಾಯಕ ಜಗ್ಗೇಶ್‌ ಹೇಳಿದ್ದಾರೆ.

ಚುನಾವಣೆಯ ಫಲಿತಾಂಶ ಹೇಗೆ ಬರಲಿದೆ ಎಂದು ನಾನು ಫಲಿತಾಂಶಕ್ಕೂ ಮೊದಲೇ ಭವಿಷ್ಯ ನುಡಿದಿದ್ದೆ. ಇನ್ನೈದು ವರ್ಷದಲ್ಲಿ ಮೋದಿ ಮತ್ತೊಂದು ಅಲೆ ಹುಟ್ಟು ಹಾಕಲಿದ್ದಾರೆ. ಭ್ರಷ್ಟರು ಜೈಲು ಸೇರುತ್ತಾರೆ. ನಮ್ಮ ಪಕ್ಷದ ಸಹಾಯದಿಂದ ಸುಮಲತಾ ಗೆದ್ದಿದ್ದರು. ಮೋದಿಯೂ ಸುಮಲತಾ ಬೆಂಬಲಕ್ಕೆ ಸಾಥ್ ಕೊಟ್ಟಿದ್ದರು. ಅವರೇ ನೇರವಾಗಿ ಅದನ್ನು ತಿಳಿಸಿದ್ದರು ಎಂದು ಹೇಳಿದರು.

ನರೇಂದ್ರ ಮೋದಿಯವರಿಗೆ ಕುಟುಂಬದ ಕಮಿಟ್‌ಮೆಂಟ್‌ ಇಲ್ಲ. ಅವರು ದುಡ್ಡಿಗಾಗಿ ಬದುಕಿಲ್ಲ. ಬದಲಿಗೆ ಸಿಂಪಲ್‌ ಆಗಿ ಬದುಕಿದ್ದಾರೆ. ನಂಬರ್‌ ಒನ್‌, ಹಾಗಾಗಿ ಅವರ ಮೇಲೆ ನಂಬಿಕೆ ಜಾಸ್ತಿ. ಸಿಕ್ಕ ಅವಕಾಶದಲ್ಲಿ ದೇಶ 70 ವರ್ಷದಲ್ಲಿ ಹಾಳಾಗಿದ್ದನ್ನು ಸರಿಪಡಿಸಿದ್ದಾರೆ. ದೇಶದ ಹಣದ ವ್ಯವಹಾರವನ್ನು ಸರಿಯಾದ ನಿಟ್ಟಿನಲ್ಲಿ ಆಗುವಂತೆ ಮಾಡಲು ನೋಟು ಅಮಾನ್ಯೀಕರಣದ ಮೂಲಕ ಕಾನೂನು ಪ್ರಕಾರವೇ ಪಾರದರ್ಶಕ ಹಣಕಾಸು ವ್ಯವಹಾರವನ್ನು ಮುಂದಿಟ್ಟಿದ್ದಾರೆ.

ಜಿಎಸ್‌ಟಿ ಜಾರಿಯಿಂದಾದ ಅಸ್ತವ್ಯಸ್ತವು ಹೊಸ ವ್ಯವಸ್ಥೆಯೊಂದನ್ನು ಜಾರಿಗೆ ತಂದಾಗ ಆಗುವಂತದ್ದೇ ಆಗಿದೆ ಎಂದು ತಿಳಿಸಿದರು.

Actror Jaggesh,PM Modi,lok saha election result

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ