ಪ್ರಧಾನಿ ಮೋದಿ ಭೇಟಿಗೆ ತೆರಳುವ ಸಚಿವರಿಗೂ ಭದ್ರತಾ ಚೆಕ್; ರೋಡ್ ಶೋ ನಡೆಸದಿರಲು ಮೋದಿಯವರಿಗೆ ಗೃಹ ಸಚಿವಾಲಯ ಸೂಚನೆ

ನವದೆಹಲಿ:ಜೂ-26: ಪ್ರಧಾನಿ ನರೇಂದ್ರ ಮೋದಿಗೆ ಉಗ್ರ ಸಂಘಟನೆಗಳು ಹಾಗೂ ಮಾವೋವಾದಿಗಳಿಂದ ಜೀವ ಬೆದರಿಕೆ ಇರುವುದರಿಂದ ಪ್ರಧಾನಿ ಭದ್ರತಾ ನಿಯಮಗಳಲ್ಲಿ ಕೇಂದ್ರ ಗೃಹಸಚಿವಾಲಯ ಭಾರೀ ಭದ್ರತೆಯನ್ನು ಕೈಗೊಂಡಿದ್ದು, ಕೆಲವು ಬದಲಾವಣೆಗಳನ್ನು ಮಾಡಿದೆ.

ಗೃಹ ಸಚಿವಾಲಯ ಈ ಕುರಿತು ಮಾಹಿತಿ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೀವಬೆದರಿಕೆ ಇರುವುದು ಸತ್ಯ. ಈ ಕಾರಣಕ್ಕೆ ಅವರಿಗೆ ವಿಶೇಷ ಭದ್ರತೆ ಒದಗಿಸಲಾಗಿದೆ ಎಂದು ಹೇಳಿದೆ. ಭದ್ರತಾ ದೃಷ್ಟಿಯಿಂದ ಹೊಸ ನಿಯಮವೊಂದನ್ನು ಜಾರಿಮಾಡಲಾಗಿದ್ದು, ಈ ನಿಯಮದ ಪ್ರಕಾರ ಪ್ರಧಾನಿಯವರ ಸಮೀಪ ಸಾಮಾನ್ಯರು ಯಾರೂ ಬರುವಂತಿಲ್ಲ. ಅಷ್ಟೇ ಅಲ್ಲ ಸಚಿವರು, ಅಧಿಕಾರಿಗಳು ಕೂಡ ಮೋದಿಯವರ ವಿಶೇಷ ರಕ್ಷಣಾ ತಂಡ ತಪಾಸಣೆ ನಡೆಸಿ ಒಪ್ಪಿಗೆ ನೀಡಿದ ನಂತರವೇ ಅವರನ್ನು ಭೇಟಿ ಮಾಡಬೇಕು ಎಂದು ತಿಳಿಸಿದೆ.

ಅಂತೆಯೇ ಈ ಬಗ್ಗೆ ಎಲ್ಲ ರಾಜ್ಯ ಸರ್ಕಾರಗಳಿಗೂ ಎಚ್ಚರಿಕೆ ನೀಡಲಾಗಿದ್ದು, ಪ್ರಧಾನಿ ಮೋದಿ ಪಾಲ್ಗೊಳ್ಳುವ ಯಾವುದೇ ಕಾರ್ಯಕ್ರಮಕ್ಕೆ ಭಾರಿ ಭದ್ರತೆ ಒದಗಿಸುವಂತೆ ಸೂಚನೆ ನೀಡಿದೆ ಎಂದು

ಈಗಾಗಲೇ ಎಲ್ಲ ರಾಜ್ಯಗಳಿಗೂ ಲಿಖಿತವಾಗಿ ಸಂದೇಶ ಕಳಿಸಲಾಗಿದ್ದು, ಯಾರೇ ಆಗಿರಲಿ ಪ್ರಧಾನಿ ನಿಕಟ ಸಂಪರ್ಕಕ್ಕೆ ಹೋಗುವಂತಿಲ್ಲ. ಈ ಆದೇಶ ಪಾಲನೆಯಾಗಲೇ ಬೇಕು ಎಂದು ಖಡಕ್​ ಎಚ್ಚರಿಕೆ ನೀಡಲಾಗಿದೆ. ಹಾಗೆಯೇ ಮೋದಿಯವರಿಗೂ ರೋಡ್​ ಶೋ ನಡೆಸದೆ ಇರಲು ಸಲಹೆ ನೀಡಲಾಗಿದೆ.

ಮುಂಬರುವ ದಿನಗಳಲ್ಲಿ ಮೋದಿಯವರು ಛತ್ತೀಸ್​ಗಡ್​, ಜಾರ್ಖಂಡ್​, ಮಧ್ಯಪ್ರದೇಶ, ಓಡಿಶಾ, ಪಶ್ಚಿಮಬಂಗಾಳ, ಪಂಜಾಬ್​ ವಿಧಾನಸಭಾ ಚುನಾವಣಾ ನಿಮಿತ್ತ ಪ್ರಧಾನಿ ಮೋದಿ ಪ್ರವಾಸ ಮಾಡಲಿದ್ದು ಇದಕ್ಕಾಗಿ ಬಿಗಿಭದ್ರತೆ ನೀಡಲು ಸಿದ್ಧತೆ ನಡೆಸಲಾಗಿದೆ.

PM Modi, Death Threat, Security, Home ministry

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ