ಈ ವರ್ಷದ ಕೊನೇ ಮನ್ ಕಿ ಬಾತ್

ನವದೆಹಲಿ: ದೇಶದ ಅಭಿವೃದ್ಧಿಗಾಗಿ, ಸಮಾಜಮುಖಿ ಕೆಲಸವನ್ನು ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ 2018ರ ಕೊನೇ ಮನ್ ಕಿ ಬಾತ್ ನಲ್ಲಿ ಕತ್ರೆ ನೀಡಿದ್ದಾರೆ.

51 ನೇ ಮನ್ ಕಿ ಬಾತ್ ಆವೃತ್ತಿಯಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮನ್​ ಕಿ ಬಾತ್​ನಲ್ಲಿ ಕೇಂದ್ರ ಸರ್ಕಾರದ ವರ್ಷದ ಸಾಧನೆ ಬಗ್ಗೆ ತಿಳಿಸಿದರು.

ಪ್ರಸಕ್ತ ವರ್ಷದಲ್ಲಿ ದೇಶದ ಪ್ರತಿ ಹಳ್ಳಿಗೂ ವಿದ್ಯುತ್​ ಸಂಪರ್ಕ ಕಲ್ಪಿಸಲಾಗಿದೆ. 2018ರಲ್ಲಿ ಆಯುಷ್ಮಾನ್​ ಭಾರತ್​ ಎಂಬ ಆರೋಗ್ಯ ವಿಮೆ ಯೋಜನೆ ಆರಂಭಿಸಿದ್ದೇವೆ.

ದೇಶದ ಜನತೆಗೆ ಹೊಸ ವರ್ಷದ ಶುಭಾಶಯ, ಏಷ್ಯನ್​ ಗೇಮ್ಸ್​ ಮತ್ತು ಅಂಧರ ವಿಶ್ವ ಕಪ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿ ಮಾತು ಆರಂಭಿಸಿದ ಅವರು, ಭಾರತ ಸರ್ಕಾರ ಪ್ರಜೆಗಳನ್ನು ಬಡತನದಿಂದ ಹೊರ ತರುತ್ತಿದೆ ಎಂಬ ವಿಷಯವನ್ನು ಅಂತಾರಾಷ್ಟ್ರೀಯ ಸುದ್ದಿಸಂಸ್ಥೆಗಳು ವರದಿ ಮಾಡಿದೆ ಎಂದರು.

2018ರಲ್ಲಿ ಆಯುಷ್ಮಾನ್​ ಭಾರತ್​ ಎಂಬ ಆರೋಗ್ಯ ವಿಮೆ ಯೋಜನೆ ಆರಂಭಿಸಿದ್ದೇವೆ. ಸ್ಟ್ಯಾಚು ಆಫ್ ಯುನಿಟಿ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು. ನಮ್ಮ ಪರಿಶ್ರಮದಿಂದ ದೇಶ ಇಂದು ಪ್ರಗತಿ ಕಾಣುತ್ತಿದೆ ಎಂಕೇಂದ್ರದ ಸಾಧನೆಗಳನ್ನು ವಿವರಿಸಿದರು.

2018 ವರ್ಷ ಅಂತ್ಯಗೊಳ್ಳುತ್ತಿದ್ದು, 2019ನೇ ನೂತನ ವರ್ಷ ಆರಂಭವಾಗುತ್ತಿದೆ. ಕಳೆದ ವರ್ಷದ ಕುರಿತು ಚರ್ಚೆಗಳು ನಡೆಯುವುದು ಸಾಮಾನ್ಯ. ಹೊಸ ವರ್ಷ ಬರುತ್ತಿದ್ದು, ಸಂಕಲ್ಪ ಮಾಡುವ ಸಮಯ ಕೂಡ ಹತ್ತಿರ ಬಂದಿದೆ. ದೇಶ ಹಾಗೂ ಸಮಾಜದ ಪ್ರಗತಿ ನಿಟ್ತಿನಲ್ಲಿ ಜನತೆ ಕಾರ್ಯೋನ್ಮುಖವಾಗಬೇಕು ಎಂದರು.

ಭಾರತೀಯ ಅಥ್ಲೀಟ್ ಗಳನ್ನು ಕೊಂಡಾಡಿರುವ ಅವರು, ಏಷ್ಯನ್ ಗೇಮ್ಸ್ ನಲ್ಲಿ ಭಾರತ ಸಾಕಷ್ಟು ಪದಕಗಳನ್ನು ಗೆತ್ತುಕೊಂಡಿದೆ. ಪ್ಯಾರಾ ಏಷ್ಯನ್ ಗೇಮ್ಸ್ ನಲ್ಲೂ ಭಾರತ ಉತ್ತಮ ಪ್ರದರ್ಶನವನ್ನು ನೀಡಿದೆ ಎಂದಿದ್ದಾರೆ.

ಪುಣೆಯ 20 ವರ್ಷದ ವೇದಾಂಗಿ ಕುಲಕರ್ಣಿ 159 ದಿನಗಳಲ್ಲಿ ಅತಿ ವೇಗವಾಗಿ ಸೈಕಲ್​ನಲ್ಲಿ ವಿಶ್ವ ಪರ್ಯಟನೆ ಮಾಡಿದ ಯುವತಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಸೈಕಲ್​ನಲ್ಲಿ ದಿನಕ್ಕೆ 300 ಕಿ.ಮೀ. ಕ್ರಮಿಸುತ್ತಿದ್ದ ಅವರು ಇತರರಿಗೂ ಸ್ಫೂರ್ತಿ ಎಂದು ಶ್ಲಾಘಿಸಿ, ಜತೆಗೆ ಜೂನಿಯರ್​ ನ್ಯಾಷನಲ್​ ಬಾಕ್ಸಿಂಗ್​ ಚಾಂಪಿಯನ್​ಶಿಪ್​ನಲ್ಲಿ ಚಿನ್ನ ಗೆದ್ದ 16 ವರ್ಷದ ರಜನಿ ಸಾಧನೆ ಅಮೋಘವಾದದ್ದು. ಅವರಿಗೆ ಹಾಗೂ ಅವರ ಕುಟುಂಬಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಕೋರಿಯಾದಲ್ಲಿ ನಡೆದ ಕರಾಟೆ ಚಾಂಪಿಯನ್​ಶಿಪ್​ನಲ್ಲಿ ಕಾಶ್ಮೀರದ 12 ವರ್ಷದ ಬಾಲಕಿ ಹನಯಾ ಚಿನ್ನದ ಪದಕ ಗೆದ್ದಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.

ಪ್ರಯಾಗರಾಜ್​ದಲ್ಲಿ ಜ.15ರಿಂದ ಕುಂಭ ಮೇಳೆ ಆರಂಭವಾಗಲಿದೆ. ಯುನಿಸ್ಕೋ ಕೂಡ ಕುಂಭ ಮೇಳವನ್ನು ಪಾರಂಪರಿಕ ಸಂಸ್ಕೃತಿ ಎಂದು ಕಳೆದ ವರ್ಷ ಘೋಷಿಸಿದೆ ಎಂದು ನೆನೆದರು.

PM Modi, Man Ki Baat

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ