ಸಚಿವ ಡಿ ಕೆ ಶಿವಕುಮಾರ್ ಆಪ್ತ ಎಂದು ಹೇಳಿ ವಂಚನೆ

Varta Mitra News

ಬೆಂಗಳೂರು:ಜು-೨೯: ಸಚಿವ ಡಿ.ಕೆ.ಶಿವಕುಮಾರ್‌ ಆಪ್ತ ಎಂದು ಹೇಳಿ, ವ್ಯಕ್ತಿಯೊಬ್ಬ ಕೆಪಿಎಸ್‌ಸಿ ಸದಸ್ಯ ಕೋಟಾದಲ್ಲಿ ಸರ್ಕಾರಿ ಕೆಲಸ ಕೊಡುವುದಾಗಿ ಯುವಕನೊಬ್ಬನಿಗೆ ಬರೋಬ್ಬರಿ 14 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ವಂಚಕ ಮಂಜುನಾಥ್‌, ವೆಂಕಟೇಶ್‌ ಎನ್ನುವವರಿಗೆ ಕೆಪಿಎಸ್‌ಸಿ ಕೋಟಾದಡಿ ಹುದ್ದೆ ಕೊಡಿಸುತ್ತೇನೆ. ನನಗೆ ಸಚಿವರ ಆಪ್ತ ಎಂದು ಹಂತ ಹಂತವಾಗಿ ನಗದು ರೂಪದಲ್ಲಿ ಹಣವನ್ನು ಪಡೆದಿದ್ದಾನೆ. ಮಾತ್ರವಲ್ಲದೆ ನಕಲಿ ನೇಮಕಾತಿ ಪತ್ರವನ್ನೂ ಕಳುಹಿಸಿದ್ದಾನೆ. ಸಚಿವರ ಆಪ್ತ ಶಾಖಾಧಿಕಾರಿ ಎಂಬ ನಕಲಿ ಗುರುತು ಪತ್ರವನ್ನೂ ತೋರಿಸಿ ವಂಚಿಸಿದ್ದ.

ವೆಂಕಟೇಶ್‌ ಅವರು ಕೆಪಿಎಸ್‌ಸಿ ಕಚೇರಿಯಲ್ಲಿ ವಿಚಾರಿಸಿದಾಗ ವಂಚನೆ ಬಯಲಾಗಿದೆ. ನಕಲಿ ಪ್ರಮಾಣ ಪತ್ರ ಎಂದು ತಿಳಿದು ದಂಗಾಗಿದ್ದಾರೆ. ವಿಚಾರವನ್ನು ಪ್ರಶ್ನಿಸಿದಾಗ ಮಂಜುನಾಥ್‌ ಮೊಬೈಲ್‌ ಸ್ವಿಚ್‌ ಆಫ್ ಮಾಡಿಕೊಂಡು ತಪ್ಪಿಸಿಕೊಂಡಿದ್ದ.

ಪ್ರಕರಣ ಸಂಬಂಧ ವೆಂಕಟೇಶ್ ಪೊಲೀಸರಿಗೆ ದೂರು ನೀಡಿದ್ದು, ವಂಚಕ ಮಂಜುನಾಥ್‌ನನ್ನು ಸದ್ಯ ಸುಬ್ರಹ್ಮಣ್ಯ ನಗರ ಠಾಣೆಯ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Bangalore,cheater arrested,Subrahmanya nagara police

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ