ಶಿಕ್ಷಣದ ಜತೆ ಕೌಶಲ್ಯ ಮೈಗೂಡಿಸಿಕೊಳ್ಳಿ

ಬೆಂಗಳೂರು: ವಿಶ್ವವಿದ್ಯಾಲಯದ ಶಿಕ್ಷಣ ವಿದ್ಯಾರ್ಥಿಗಳಿಗೆ ಬದುಕಿನ ಬುನಾದಿಯನ್ನು ನೀಡುತ್ತದೆ. ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕೌಶಲ್ಯವನ್ನು ಮೈಗೂಡಿಸಿಕೊಂಡಿರಬೇಕು ಎಂದು ಗ್ರಾಸ್‍ರೂಟ್ಸ್ ರೀಸರ್ಚ್ ಮತ್ತು ಅಡ್ವಕೇಸಿ ಚಳವಳಿಯ ಮುಖ್ಯಸ್ಥ ಆರ್.ಬಾಲಸುಬ್ರಹ್ಮಣ್ಯಂ ಹೇಳಿದರು.
ಶುಕ್ರವಾರ ಬೆಂಗಳೂರಿನ ದಯಾನಂದ ಸಾಗರ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು.
ಇಂದು ವೃತ್ತಿ ಪರ ಕೋರ್ಸ್‍ಗಳು ಹಾಗೂ ಕ್ಷೇತ್ರಗಳು ಆಗಾಗ ಬದಲಾಗುತ್ತಿವೆ. ಪದವಿ ಆರಂಭದಲ್ಲಿ ಬೋಸಿದ ಪಾಠ ಪದವಿಯಿಂದ ಹೊರಬರುವ ವೇಳೆಗೆ ಬೇರೆಯೇ ಸಂದರ್ಭಗಳು ಸೃಷ್ಟಿಯಾಗಿರುತ್ತವೆ. ವೈದ್ಯಕೀಯ, ಇಂಜಿನಿಯರಿಂಗ್ ಕ್ಷೇತ್ರದಲ್ಲಿಯೂ ಆಗಾಗ ಹೊಸ ತಂತ್ರಜ್ಞಾನಗಳು ಬರುತ್ತಿವೆ. ಶಿಕ್ಷಣಗಳು ಇದಕ್ಕೆ ಪೂರಕವಾಗಿರಬೇಕು. ನಮ್ಮ ಜ್ಞಾನ ಕೌಶಲ್ಯದಿಂದ ಕೂಡಿರಬೇಕು. ವಿಶ್ವವಿದ್ಯಾಲಯದ ಶಿಕ್ಷಣ ಬುನಾದಿಯಾಗಬೇಕು. ಆದರೆ, ಬದುಕು ಕಲಿಸುವ ಪಾಠ ಮತ್ತೊಂದು ವಿಶ್ವವಿದ್ಯಾಲಯ ಇದ್ದಂತೆ ಎಂದರು.
ಇದೇ ವೇಳೆ 5 ಸಂಶೋಧನಾ ಅಭ್ಯರ್ಥಿಗಳಿಗೆ ಗೌರವ ಡಾಕ್ಟರೇಟ್ ನೀಡಲಾಯಿತು. ಅಲ್ಲದೇ 1030 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಕುಲಪತಿ ಡಾ.ಡಿ. ಹೇಮಚಂದ್ರ ಸಾಗರ್, ಉಪಕುಲಪತಿ ಡಾ.ಡಿ.ಪ್ರೇಮಚಂದ್ರ ಸಾಗರ್, ಡಾ.ಪುಟ್ಟಮಾದಪ್ಪ, ಪೊ.ಅನಿತಾ ರಾಮಲಿಂಗಂ ಮತ್ತಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ