ರವಾಂಡಾ: ಜು-24: ಐದು ದಿನಗಳ ತ್ರಿ ರಾಷ್ಟ್ರಗಳ ಪ್ರವಾಸಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ರವಾಂಡ ದೇಶದ ಜನತೆಗೆ 200 ಹಸುಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಪ್ರವಾಸದ ಮೊದಲಭಾಗವಾಗಿ ಪ್ರಧಾನಿ ಮೋದಿ ಇಂದು ದಕ್ಷಿಣ ಆಫ್ರಿಕಾ ಖಂಡದ ಪಶ್ಚಿಮ ಭಾಗದಲ್ಲಿರುವ ರವಾಂಡಾದ ಮಾದರಿ ಗ್ರಾಮ ರವೆರು ಗ್ರಾಮಕ್ಕೆ ಭೇಟಿ ನೀಡಿದ್ದು, 200 ಹಸುಗಳನ್ನು ಉಡುಗೊರೆಯಾಗಿ ನೀಡಿದರು.
ಈ ಮೂಲಕ ಅಲ್ಲಿನ ಸ್ಥಳೀಯ ಸರ್ಕಾರ ಜಾರಿಗೆ ತಂದಿರುವ ‘ಗಿರಿಂಕಾ’ ಯೋಜನೆಗೆ ಪ್ರಧಾನಿ ತಮ್ಮ ಸಹಾಯಹಸ್ತ ಚಾಚಿದ್ದಾರೆ.
ರವಾಂಡಾ ಅಧ್ಯಕ್ಷರು 2006ರಲ್ಲಿ ಪ್ರತಿಯೊಂದು ಬಡ ಕುಟುಂಬವೊಂದಕ್ಕೆ ಹಸು ವೊಂದನ್ನು ಉಡುಗೊರೆ ನೀಡುವ ‘ಗಿರಿಂಕಾ’ ಯೋಜನೆಯನ್ನು ಜಾರಿಗೆ ತಂದಿದ್ದರು. ಇಲ್ಲಿಯವರೆಗೆ 3.5 ಲಕ್ಷ ಫಲಾನುಭವಿಗಳಿಗೆ ಯೋಜನೆ ತಲುದೆ. ಬಡಕುಟುಂಬ ವೊಂದಕ್ಕೆ ಒಂದು ಹಸುವನ್ನು ಸರಕಾರ ಉಡುಗೊರೆಯಾಗಿ ನೀಡುತ್ತದೆ. ಆ ಹಸುವಿನಿಂದ ಜನಿಸುವ ಮೊದಲ ಕರು ಹೆಣ್ಣಾಗಿದ್ದರೆ ಆ ಕರುವನ್ನು ಆ ಕುಟುಂಬ ನೆರೆಮನೆಯವರಿಗೆ ಉಡುಗೊರೆಯಾಗಿ ನೀಡುವುದು ಈ ಯೋಜನೆಯ ವಿಶೇಷ. ಇದು ಭಾರತದ ಹಳೆಯ ಸಂಪ್ರಾದಾಯ ಕೂಡಾ ಆಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಅದೇ ದೇಶದ 200 ಹಸುಗಳನ್ನು ಉಡುಗೂರೆಯಾಗಿ ನೀಡಿದ್ದಾರೆ.
PM Modi,Africa: gift 200 cows to Rwandan village, as part of Girinka programme