ಸರಳತೆಗೊಂದು ಉದಾಹರಣೆ: ಸೋಫಾ ನಿರಾಕರಿಸಿ ಎಲ್ಲರಂತೆ ಕುರ್ಚಿಯಲ್ಲಿ ಕುಳಿತ ಮೋದಿ

ವ್ಲಾಡಿವೋಸ್ಟಾಕ್: ರಷ್ಯಾದ ವ್ಲಾಡಿವೋಸ್ಟಾಕ್’ನಲ್ಲಿ  ನಡೆದ ಫೋಟೋ ಸೆಷನ್ ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದುಬಾರಿ ಸೋಫಾವನ್ನು ನಿರಾಕರಿಸಿ, ಕುರ್ಚಿಯಲ್ಲಿ ಕುಳಿತುಕೊಂಡು ಸರಳತೆಗೆ ಉದಾಹರಣೆಯಾಗಿದ್ದಾರೆ.

ಫೋಟೋ ಸೆಷನ್ ನಲ್ಲಿ ಪ್ರಧಾನಿ ಮೋದಿಯವರು ದುಬಾರಿಯಾದ ಹಾಗೂ ವಿಶಾಲವಾದ ಸೋಫಾವನ್ನು ನಿರಾಕರಿಸಿ. ಕುರ್ಚಿಯಲ್ಲಿ ಕುಳಿತುಕೊಂಡಿದ್ದಾರೆ. ಇದನ್ನು ಕಂಡ ಇತರೆ ಅಧಿಕಾರಿಗಳು ತಾವೂ ಕೂಡ ಕುರ್ಚಿಯಲ್ಲಿ ಕುಳಿತುಕೊಂಡಿದ್ದಾರೆ.

ಮೋದಿಯವರ ಈ ಸರಳತೆಯ ಮನಸ್ಥಿತಿಯನ್ನು ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರು ಸಾಮಾಜಿಕ ಜಾಲತಾಣದ ತಮ್ಮ ಅಧಿಕೃತ ಖಾತೆ ಟ್ವಿಟರ್ ನಲ್ಲಿ ಹೆಂಚಿಕೊಂಡಿದ್ದಾರೆ.

ಮೋದಿಯವರು ಸರಳೆಯ ಉದಾಹರಣೆಯನ್ನು ಇಂದು ಮತ್ತೆ ಕಾಣಬಹುದು. ರಷ್ಯಾದಲ್ಲಿ ತಮಗಾಗಿ ವ್ಯವಸ್ಥೆ ಮಾಡಲಾಗಿದ್ದ ವಿಶೇಷ ಆಸನವನ್ನು ನಿರಾಕರಿಸಿ, ಇತರರೊಂದಿಗೆ ಸಾಮಾನ್ಯ ಕುರ್ಚಿಯಲ್ಲಿ ಕುಳಿತುಕೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆಂದು ಗೋಯಲ್ ಟ್ವೀಟ್ ಮಾಡಿದ್ದಾರೆ.

ಮೋದಿಯವರ ಸರಳತೆಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹಲವರು ಮೋದಿಯವರ ಸರಳತೆಯನ್ನು ಶ್ಲಾಘಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ