ಕಾವೇರಿ ನದಿ ನೀರು ವಿಚಾರ: ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿಎಂ ಸಿದ್ದರಾಮಯ್ಯ ಪತ್ರ

ಬೆಂಗಳೂರು:ಏ-22: ಕಾವೇರಿ ನಿರ್ವಹಣಾ ಮಂಡಳಿ ರಚನೆ ಪ್ರಬಲವಾಗಿ ವಿರೋಧಿಸಿರುವ ರಾಜ್ಯ ಸರ್ಕಾರ, ಕಾವೇರಿ ನಿರ್ವಹಣಾ ಮಂಡಳಿ ರಚನೆ ಸಂವಿಧಾನಾತ್ಮಕ ಕ್ರಮವಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮುಖ್ಯಮಂತ್ರಿ ಸಿದದ್ರಾಮಯ್ಯ ಪತ್ರ ಬರೆದ್ದಾರೆ.

ಕಾವೇರಿ ನಿರ್ವಹಣಾ ಮಂಡಳಿ ಐತೀರ್ಪಿನಲ್ಲಿ ನೀರು ನಿರ್ವಹಣಾ ಮಂಡಳಿ ರಚಿಸಬಹುದು ಎಂದು ಕೇವಲ ಶಿಫಾರಸು ರೂಪದಲ್ಲಿ ಹೇಳಿದೆಯೇ ವಿನಃ, ನಿರ್ದೇಶನವನ್ನು ನೀಡಿಲ್ಲ ಎಂದು ಸಿಎಂ ಪತ್ರದಲ್ಲಿ ಖಚಿತಪಡಿಸಿದ್ದಾರೆ.

ನ್ಯಾಯಮಂಡಳಿಯ ಈ ಶಿಫಾರಸ್ಸನ್ನು ಸುಪ್ರೀಂಕೋರ್ಟ್ ಫೆ.16ರಂದು ನೀಡಿರುವ ಆದೇಶದಲ್ಲಿ ಸಮರ್ಥಿಸಿಲ್ಲ. ಹೀಗಾಗಿ ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕೆಂಬ ತಮಿಳುನಾಡು ಸರ್ಕಾರದ ಬೇಡಿಕೆಯು ನ್ಯಾಯಮಂಡಳಿ ಐತೀರ್ಪು ಮತ್ತು ಸುಪ್ರೀಂಕೋರ್ಟ್ ಪರಿಷ್ಕೃತ ತೀರ್ಪು ಜಾರಿಯ ಅಗತ್ಯಗಳನ್ನು ಮೀರುತ್ತದೆ ಎಂದು ತಿಳಿಸಿದ್ದಾರೆ.

ಈ ರೀತಿಯ ಪ್ರಸ್ತಾವನೆಗಳು ಸಂವಿಧಾನ ಖಾತರಿಪಡಿಸಿರುವ ಒಕ್ಕೂಟ ವ್ಯವಸ್ಥೆಯನ್ನು ನಾಶಪಡಿಸುತ್ತದೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರದ ಮುಂದೆ ರಾಜ್ಯ ಇಟ್ಟಿರುವ ಕರಡು ಯೋಜನೆ ಕುರಿತು ಚರ್ಚೆ ನಡೆಸಲು ಕೂಡಲೇ ಸಮಯ ನಿಗದಿಪಡಿಸುವಂತೆ ಮೋದಿಯವರಿಗೆ ಒತ್ತಾಯಿಸಿದ್ದಾರೆ.

Cauvery water dispute,CM Siddaramaiah writes letter,PM Modi,

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ