ಮುಂಬೈ ದಾಳಿ ರೂವಾರಿ ಡೇವಿಡ್ ಹೆಡ್ಲಿ ಮೇಲೆ ಹಲ್ಲೆ: ಹೆಡ್ಲಿ ಸ್ಥಿತಿ ಗಂಭೀರ

ಚಿಕಾಗೋ:ಜು-24: 2008ರ ಮುಂಬೈ ದಾಳಿ ಪ್ರಕರಣದ ಜೈಲು ಪಾಲಾಗಿರುವ ಆರೋಪಿ ಪಾಕಿಸ್ತಾನ ಮೂಲದ ಅಮೆರಿಕ ಉಗ್ರ ಡೇವಿಡ್ ಹೆಡ್ಲಿ ಮೇಲೆ ಸಹ ಕೈದಿಗಳಿಬ್ಬರು ಹಲ್ಲೆ ನಡೆಸಿದ್ದು, ಹೆಡ್ಲಿ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಲು ಅಮೆರಿಕ ನಿರಾಕರಿಸಿದೆ.

ಡೇವಿಡ್ ಹೆಡ್ಲಿ ಮೇಲಿನ ಹಲ್ಲೆ ಕುರಿತು ಮಾಹಿತಿ ನೀಡಲು ನಮಗೆ ಸಾಧ್ಯವಾಗುತ್ತಿಲ್ಲ ಎಂದು ಚಿಕಾಗೋದ ಕಾರಾಗೃಹ ಇಲಾಖೆ ತಿಳಿಸಿದೆ.

ಜುಲೈ 8ರಂದು ಡೇವಿಡ್ ಹೆಡ್ಲಿ ಮೇಲೆ ಸಹ ಕೈದಿಗಳಿಬ್ಬರು ಹಲ್ಲೆ ಮಾಡಿದ್ದರು, ಗಂಬೀರವಾಗಿ ಗಾಯಗೊಂಡಿದ್ದ ಹೆಡ್ಲಿಯನ್ನು ಇವಾಟ್ಸ್‌ನ್ ಆಸ್ಪತ್ರಗೆ ದಾಖಲಿಸಲಾಗಿದ್ದು, ಹೆಡ್ಲಿ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿತ್ತು.

2008ರ ಮುಂಬೈ ದಾಳಿ ಪ್ರಕರಣದ ಅಪರಾಧಿಯಾಗಿರುವ ಹೆಡ್ಲಿಗೆ ಅಮೆರಿಕ ನ್ಯಾಯಾಲಯ 35 ವರ್ಷ ಜೈಲು ಶಿಕ್ಷೆ ವಿದಿಸಿದೆ. ಚಿಕಾಗೋದ ಕಾರಾಗೃಹದಲ್ಲಿ ಹೆಡ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ.

26/11 Convict David Headley, Reportedly Critical, After Attack In US Jail

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ