ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಇಂದು ಆಷಾಢ ಶುಕ್ರವಾರ ಅವಿಶ್ವಾಸ ಮತ ಎದುರಿಸುವ ಅಗ್ನಿಪರೀಕ್ಷೆ ಎದುರಾಗಿದೆ. ಇದರಲ್ಲಿ ಗೆದ್ದುಬರುವ ವಿಶ್ವಾಸದಲ್ಲಿ ಬಿಜೆಪಿ ಇದ್ದರೂ ಕೂಡ ಲೋಕಸಭೆಯಲ್ಲಿ ಏನಾಗುತ್ತದೆ ಎಂಬ ಇಡೀ ದೇಶದ ಜನತೆಯ ಗಮನ ಶಕ್ತಿಕೇಂದ್ರ ದೆಹಲಿಯ ಸಂಸತ್ತು ಮೇಲಿದೆ. ಲೋಕಸಭೆಯಲ್ಲಿ ಇಂದು ತೀವ್ರ ಗದ್ದಲ, ಕೋಲಾಹಲ ಏರ್ಪಡುವ ಸಾಧ್ಯತೆಯಿರುವುದರಿಂದ ಸಂಸದರು ಸಂಯಮ ಕಾಪಾಡುವಂತೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಹೋದ್ಯೋಗಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಅವಿಶ್ವಾಸ ನಿರ್ಣಯ ಮಂಡನೆ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಟ್ವೀಟ್ ಮಾಡಿರುವ ಅವರು, ”ಇಂದು ನಮ್ಮ ಸಂಸತ್ತಿನ ಪ್ರಜಾಪ್ರಭುತ್ವದಲ್ಲಿ ಬಹಳ ಮುಖ್ಯವಾದ ದಿನ. ಈ ಸಂದರ್ಭದಲ್ಲಿ ನನ್ನ ಸಂಸದ ಸಹೋದ್ಯೋಗಿಗಳು ಸಂದರ್ಭವನ್ನು ಸದುಪಯೋಗಪಡಿಸಿಕೊಳ್ಳುತ್ತಾರೆ ಎಂಬ ವಿಶ್ವಾಸ ನನಗಿದೆ. ಇಲ್ಲಿ ರಚನಾತ್ಮಕ, ಸಮಗ್ರ ಮತ್ತು ಮುಕ್ತ ಚರ್ಚೆ ನಡೆಯುತ್ತದೆ ಎಂದು ಭಾವಿಸುತ್ತೇನೆ. ಸಂಸತ್ತಿನಲ್ಲಿ ಗೌರವಯುತವಾಗಿ ನಡೆದುಕೊಂಡು ರಚನಾತ್ಮಕ ಚರ್ಚೆ ನಡೆಸಿ ಉತ್ತಮ ಆಡಳಿತವನ್ನು ಜನತೆಗೆ ನೀಡೋಣ, ಆ ಮೂಲಕ ಸಂವಿಧಾನವನ್ನು ರಚಿಸಿದವರಿಗೆ ಗೌರವ ಸಲ್ಲಿಸೋಣ, ದೇಶದ ಜನತೆ ನಮ್ಮನ್ನು ಬಹಳ ಹತ್ತಿರದಿಂದ ಗಮನಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ.ಇಂದಿನ ಕಲಾಪದಲ್ಲಿ ಲೋಕಸಭೆಯಲ್ಲಿ ಆಡಳಿತಾರೂಢ ಎನ್ ಡಿಎ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಗದ್ದಲ, ಕೋಲಾಹಲವೇರ್ಪಡುವ ಸಾಧ್ಯತೆಯಿದೆ. ಎನ್ ಡಿಎಯ ಮಾಜಿ ಮೈತ್ರಿಪಕ್ಷ ಟಿಡಿಪಿ ಅವಿಶ್ವಾಸ ನಿರ್ಣಯವನ್ನು ಮಂಡಿಸಿದೆ.
Related Articles
ಪಿಎಚ್ಸಿ ಮೇಲ್ದರ್ಜೆಗೆ ಆರೋಗ್ಯ ಸೇವೆ ದ್ವಿಗುಣ
December 25, 2020
Varta Mitra News - SP
ಬೆಂಗಳೂರು, ರಾಜ್ಯ, ಪ್ರಧಾನಿ ಮೋದಿ
Comments Off on ಪಿಎಚ್ಸಿ ಮೇಲ್ದರ್ಜೆಗೆ ಆರೋಗ್ಯ ಸೇವೆ ದ್ವಿಗುಣ
Seen By: 98 ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಗುರಿಯಂತೆ ಪ್ರಾಥಮಿಕ ಆರೋಗ್ಯ ಕೇಂದ್ರ(ಪಿಎಚ್ಸಿ)ಗಳನ್ನು ಮೇಲ್ದರ್ಜೆಗೇರಿಸುವ ಮೂಲಕ ಮಾದರಿಯ ಆರೋಗ್ಯ ಸೇವೆ ನೀಡಲು ರಾಜ್ಯ ಸರ್ಕಾರ [more]
ವಾರಣಾಸಿಯಲ್ಲಿ ಆರ್ ಎಸ್ ಎಸ್ ಸಭೆ: ರಾಮ ಮಂದಿರ ನಿರ್ಮಾಣ ಕುರಿತು ಮಹತ್ವದ ಚರ್ಚೆ
November 11, 2018
Samachar Network-CLB
ರಾಷ್ಟ್ರೀಯ
Comments Off on ವಾರಣಾಸಿಯಲ್ಲಿ ಆರ್ ಎಸ್ ಎಸ್ ಸಭೆ: ರಾಮ ಮಂದಿರ ನಿರ್ಮಾಣ ಕುರಿತು ಮಹತ್ವದ ಚರ್ಚೆ
Seen By: 93 ವಾರಣಾಸಿ: ಇಂದಿನಿಂದ ಆರು ದಿನಗಳ ಕಲಾ ವಾರಣಾಸಿಯಲ್ಲಿ ಆರ್ ಎಸ್ ಎಸ್ ಮಹತ್ವದ ಸಭೆ ನಡೆಯುತ್ತಿದ್ದು, ಅಯೋಧ್ಯಾ ರಾಮ ಮಂದಿರ ನಿರ್ಮಾಣ ವಿಚಾರದ [more]
ದಾಖಲೆ ಪ್ರಮಾಣದಲ್ಲಿ ಮತ ಚಲಾಯಿಸಿ: ಪ್ರಧಾನಿ ಮೋದಿ ಮನವಿ
April 11, 2019
Samachar Network-CLB
ರಾಷ್ಟ್ರೀಯ
Comments Off on ದಾಖಲೆ ಪ್ರಮಾಣದಲ್ಲಿ ಮತ ಚಲಾಯಿಸಿ: ಪ್ರಧಾನಿ ಮೋದಿ ಮನವಿ
Seen By: 66 ನವದೆಹಲಿ: ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಆರಂಭವಾಗಿದ್ದು, ದಾಖಲೆ ಪ್ರಮಾಣದಲ್ಲಿ ಮತ ಚಲಾಯಿಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತದಾರರಿಗೆ ಕರೆ [more]