ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಜತೆ ಚಾಯ್ ಪೇ ಚರ್ಚಾ ನಡೆಸಿದ ಪ್ರಧಾನಿ ಮೋದಿ

ವುಹಾನ್;ಏ-28: 2 ದಿನಗಳ ಅನೌಪಚಾರಿಕ ಶೃಂಗ ಸಭೆಯಲ್ಲಿ ಪಾಕ್ಗೊಳ್ಳಲು ಚೀನಾಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿಯವರು ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರೊದಿಗೆ ಇಂದು ಚಾಯ್ ಪೇ ಚರ್ಚಾ ನಡೆಸಿದರು.

ಪ್ರವಾಸದ ಎರಡನೇ ದಿನವಾದ ಇಂದು ಪ್ರಧಾನಿ ಮೋದಿಯವರು ಚೀನಾ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿದರು. ಮಾತುಕತೆ ವೇಳೆ ಉಭಯ ದೇಶಗಳ ನಡುವೆ ಉತ್ತಮ ಬಾಂಧವ್ಯ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಉಭಯ ನಾಯಕರು ಭರವಸೆ ನೀಡಿದರು. ಇದೇ ವೇಳೆ ಪ್ರಧಾನಿ ಮೋದಿಯವರು ಚೀನಾ ರಾಷ್ಟ್ರದ ಪ್ರಸಿದ್ಧ ವಾದ್ಯ ಕೇಳಿ ಆನಂದಿಸಿದರು.

ಉಭಯ ದೇಶಗಳ ಬಾಂಧವ್ಯ ವೃದ್ಧಿಗೆ ಪ್ರಧಾನಿ ಮೋದಿ ಅವರು ಐದು ಅಂಶಗಳನ್ನು ಜಿನ್‌ಪಿಂಗ್‌ ಅವರ ಬಳಿ ಚರ್ಚಿಸಿದ್ದು, ‘ಸಾಮಾನ್ಯ ಚಿಂತನೆ, ಸಾಮಾನ್ಯ ಸಂಬಂಧಗಳು, ಸಾಮಾನ್ಯ ಸಹಕಾರ, ಸಾಮಾನ್ಯ ಆಕಾಂಕ್ಷೆಗಳು ಮತ್ತು ಸಾಮಾನ್ಯ ಕನಸುಗಳು ದೀರ್ಘಕಾಲೀನ ಸ್ನೇಹಕ್ಕಾಗಿ ಪ್ರೋತ್ಸಾಹಿಸುತ್ತವೆ ಎಂದು ತಿಳಿದು ಬಂದಿದೆ.

ಇದು ಇಬ್ಬರು ನಾಯಕರು ಏಕಾಂತ ಮಾತುಕತೆ ನಡೆಸುವ ಅನೌಪಚಾರಿಕ ಶೃಂಗವಾಗಿದ್ದು, ಯಾವುದೇ ಒಪ್ಪಂದಗಳಿಗೆ ಸಹಿ ಹಾಕುವುದಿಲ್ಲ. ಇಂದು ಉಭಯ ನಾಯಕರು ವುಹಾನ್ ಸರೋವರದ ಪಕ್ಕ ವಾಕ್ ಮಾಡಿದರು. ನಂತರ ದೋಣಿ ವಿಹಾರ ನಡೆಸಲಿದ್ದಾರೆ. ಮಧ್ಯಾಹ್ನ ಊಟದ ನಂತರ ಭೇಟಿ ಅಂತ್ಯಗೊಳ್ಳಲಿದೆ.

ಇನ್ನು ಪ್ರಧಾನಿ ಮೋದಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರೊಂದಿಗೆ ಸಂಗೀತ ಕಲಾವಿದರೊಂದಿಗೆ ಕೆಲ ಹೊತ್ತು ಕಳೆದು ಸಂಭ್ರಮಿಸಿದರು. ಸಂಗೀತ ರಸ ಸಂಜೆಯಲ್ಲಿ ಮೋದಿ ಮತ್ತು ಜಿನ್‌ಪಿಂಗ್‌ ಅವರು ಚೀನಾ ಕಲಾವಿದರು ಪ್ರಸ್ತುತ ಪಡಿಸಿದ 1882 ರ ರಿಷಿ ಕಪೂರ್‌ ಪೂನಮ್‌ ದಿಲ್ಹನ್‌ ಜೋಡಿಯ ಜನಪ್ರಿಯ ಬಾಲಿವುಡ್‌ ಚಿತ್ರ ಯೇ ವಾದಾ ರಹಾ ದ ತು ತು ಹೆ ವಹೀ.. ಹಾಡಿಗೆ ಮನಸೋತರು.

ಇತ್ತೀಚೆಗೆ ಡೋಕ್ಲಾಂ ವಿಚಾರದಲ್ಲಿ 73 ದಿನಗಳ ಕಾಲ ಉಭಯ ದೇಶಗಳ ನಡುವೆ ನಡೆದ ಘರ್ಷಣೆಯ ನಂತರ ಪರಸ್ಪರ ಸಂಬಂಧ ಹದಗೆಟ್ಟಿದ್ದು, ಅದನ್ನು ಸರಿಪಡಿಸಿಕೊಳ್ಳಲು ಈ ಶೃಂಗವು ಮಹತ್ವದ್ದಾಗಿದೆ ಎಂದು ಹೇಳಲಾಗಿದೆ.

PM Modi, Xi Jinping,Chai Pe Charcha, China

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ