ನಮ್ಮ ಹೋರಾಟ ಉಗ್ರವಾದದ ವಿರುದ್ಧ ಹೊರತು ಕಾಶ್ಮೀರಿಗಳ ವಿರುದ್ಧವಲ್ಲ: ಪ್ರಧಾನಿ ಮೋದಿ

ಟೊಂಕ್: ನಾನು ಪಾಕ್​ ಪ್ರಧಾನಿಗೆ ಹೇಳಿದ್ದೆ ‘ನಾವು ಬಡತನ ಹಾಗೂ ಅನಕ್ಷರತೆ ವಿರುದ್ಧ ಒಗ್ಗೂಡಿ ಹೋರಾಡೋಣ ಎಂದು’ ಆದರೆ, ಅವರು ಹೇಳಿದ್ದರು ನಾನು ಪಠಾಣ್​​​ ಮಗನಾಗಿದ್ದು, ತನ್ನ ಹೇಳಿಕೆ ಬದ್ಧವಾಗಿದ್ದೇನೆ ಎಂದಿದ್ದರು. ಈಗ ಅವರ ಮಾತುಗಳನ್ನು ಒರೆಗೆ ಹಚ್ಚುವ ಕಾಲ ಬಂದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ರಾಜಸ್ಥಾನದ ಟೊಂಕದಲ್ಲಿ ಮಾತನಾಡಿದ ಪ್ರಧಾನಿ, ನಾನು ಹೇಳುತ್ತಿದ್ದೇನೆ. ಇಮ್ರಾನ್​ ಖಾನ್​ ಅವರು ತಮ್ಮ ಮಾತುಗಳಿಗೆ ಬದ್ಧರಾಗಿರಬೇಕು. ಇವತ್ತು ಅವರ ಮಾತುಗಳನ್ನ ಒರೆಗೆ ಹಚ್ಚುವ ಸಮಯ ಬಂದಿದೆ ಎಂದು ಪಾಕ್ ಪ್ರಧಾನಿಗೆ ಪರೋಕ್ಷವಾಗಿ ಟಾಂಗ್​ ಕೊಟ್ಟರು.

ನಮ್ಮ ಹೋರಾಟ ಏನಿದ್ದರು ಉಗ್ರವಾದದ ವಿರುದ್ಧ, ಮಾನವೀಯತೆಯ ವಿರೋಧಿಗಳ ವಿರುದ್ಧ ಮತ್ತು ಕಾಶ್ಮೀರದ ಉಳಿವಿಗಾಗಿ ನಮ್ಮ ಹೋರಾಟ ಎಂದರು. ಕಾಶ್ಮೀರಿಗಳ ವಿರುದ್ಧ ನಮ್ಮ ಹೋರಾಟ ಎಂದೂ ಇಲ್ಲ. ಕೆಲ ದಿನಗಳಿಂದ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಯುತ್ತಿದೆ. ಈ ರೀತಿ ದೌರ್ಜನ್ಯಗಳು ಸರಿಯಲ್ಲ. ಭಯೋತ್ಪಾದನೆ ವಿರುದ್ಧ ನಾವು ಹೋರಾಡಬೇಕೇ ಹೊರತು ಕಾಶ್ಮೀರಿ ವಿದ್ಯಾರ್ತ್ಥಿಗಳ ಮೇಲೆ ದಾಅಳಿಮಾಡುವುದಲ್ಲ ಎಂದರು.

ಪುಲ್ವಾದಲ್ಲಿ ದಾಳಿ ನಡೆದ 100 ಗಂಟೆಗಳಲ್ಲೇ ಉಗ್ರರ ಮಾಸ್ಟರ್​ ಮೈಂಡ್​ಗಳ ಮೇಲೆ ದಾಳಿ ನಡೆಸಿ ಮುಗಿಸಿಹಾಕಿದ್ದಾರೆ. ನಮ್ಮ ಸೈನಿಕರನ್ನ ಅಭಿನಂದಿಸುತ್ತೇನೆ ಎಂದು ಪ್ರಧಾನಿ ಹೇಳಿದರು.

PM Modi, Rally,Rajasthan,tonk

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ