ಈದಿನ, ಜೂನ್ 11ರ ವಿಶೇಷ ಸುದ್ದಿಗಳು
- ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಏಮ್ಸ್ ಆಸ್ಪತ್ರೆಗೆ ದಾಖಲು
- ಬ್ಯಾಂಕ್ ಗೆ ಬಹುಕೋಟಿ ವಂಚನೆ ಎಸಗಿರುವ ಉದ್ಯಮಿ ನೋರವ್ ಮೋದಿ ಇಂಗ್ಲೆಂಡಿನಲ್ಲಿ ರಾಜಕೀಯ ಆಶ್ರಯದಲ್ಲಿದ್ದಾರೆ: ಫೈನಾನ್ಷಿಯಲ್ ಟೈಮ್ಸ್ ವರದಿ
- ಪ್ರಧಾನಿ ಮೋದಿ ಹತ್ಯೆಗೆ ಮಾವೋವಾದಿಗಳು ಸಂಚು ರೂಪಿಸಿದ್ದಾರೆ ಎಂಬ ಸುದ್ದಿ ಹರಡಿ ಅನುಕಂಪ ಗಿಟ್ಟಿಸಿ ಅದನ್ನು ಮತವಾಗಿ ಪರಿವರ್ತನೆ ಮಾಡಿಕೊಳ್ಳುವ ತಂತ್ರವನ್ನು ಬಿಜೆಪಿ ಹೆಣೆದಿದೆ: ಎನ್ ಸಿಪಿ ಮುಖಂಡ ಶರದ್ ಪವಾರ್
- ಕಾನೂನು ಕ್ರಮದ ಎಚ್ಚರಿಕೆ ಬೆನ್ನಲ್ಲೇ ಶಹ್ಲಾ ರಷೀದ್ ಮತ್ತೊಂದು ಟ್ವೀಟ್: ಜೆಎನ್ಯು ವಿದ್ಯಾರ್ಥಿ ಉಮರ್ ಖಾಲಿದ್ ಹಾಗೂ ಆತನ ತಂದೆಯ ಮೇಲೆ ಹಲ್ಲೆಯಾದಾಗ ಯಾರೂ ಏಕೆ ಎಚ್ಚರ ವಹಿಸಿಲ್ಲ ಎಂದು ತಿರುಗೇಟು
- ಶೆಹ್ಲಾ ರಷೀದ್ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನಿಡಿದ ಸಚಿವ ನಿತಿನ್ ಗಡ್ಕರಿ
- ಒಂದಾದ ನಾರಾಯಣಗೌಡ-ಪ್ರವೀಣ್ ಶೆಟ್ಟಿ: ಕರವೇಗೆ ಆನೆ ಬಲ
- ಗೋರಖ್ಪುರ ಆಸ್ಪತ್ರೆ ದುರಂತ: ಡಾ. ಕಫೀಲ್ ಖಾನ್ ಸಹೋದರನಿಗೆ ಗುಂಡು
- ಗೌರಿ ಹತ್ಯೆ ಆರೋಪಿಗಳ ವಿಚಾರಣೆ ನಡೆಸಲಿರುವ ಸಿಬಿಐ, ಮಹಾರಾಷ್ಟ್ರ ಎಸ್ ಐಟಿ
- ಕಾಂಗ್ರೆಸ್-ಬಿಜೆಪಿ ನಡುವೆ ತುರುಸಿನ ಸ್ಪರ್ಧೆ: ಯಾರ ಮಡಿಲಿಗೆ ‘ಜಯ’ನಗರ..?
- ಅಮೆರಿಕ ಸರಕುಗಳ ಮೇಲೆ ಅಧಿಕ ಸುಂಕ ವಿಧಿಸುತ್ತಿರುವ ಭಾರತ, ಅಸಮಾಧಾನ ವ್ಯಕ್ತಪಡಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್
- ಕಿಮ್ ಜಾಂಗ್ ಉನ್ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಶೃಂಗಸಭೆ ಕುತೂಹಲ ಕೆರಳಿಸಿದೆ
- ಪ್ರಸಿದ್ಧ ಕೈಲಾಸ ಮಾನಸ ಸರೋವರ ಯಾತ್ರೆ ಸಚಿವ ವಿ.ಕೆ.ಸಿಂಗ್ ಹಸಿರು ನಿಶಾನೆ
- ಕೇರಳದ ವಿವಿಧೆಡೆ ವರುಣನ ರುದ್ರಾವತಾರ 18 ಮಂದಿ ಮೃತ
- ಭಾರತದ ಮೇಲೆ ಭಯೋತ್ಪಾದನೆ ಸಂಘಟನೆಗಳು ಒಗ್ಗೂಡಿ ದೊಡ್ಡ ಮಟ್ಟದಲ್ಲಿ ದಾಳಿಗಳನ್ನು ನಡೆಸಲು ಹುನ್ನಾರ
- ಪಾಕಿಸ್ತಾನದ ಜೈಲೊಂದರಲ್ಲಿ ಗುಜರಾತ್ನ ಮೀನುಗಾರನೊಬ್ಬ ಮೃತ
- ಅಸ್ಸಾಂನಲ್ಲಿ ಇಂದು ರಿಕ್ಟರ್ ಮಾಪಕದಲ್ಲಿ 5.1ರಷ್ಟು ಭೂಕಂಪ