ಕಿಮ್ ಜಾಂಗ್ ಉನ್ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಶೃಂಗಸಭೆ ಕುತೂಹಲ ಕೆರಳಿಸಿದೆ

ಸಿಂಗಪುರ್, ಜೂ.11- ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ನಾಳೆ ಸಿಂಗಪುರ್‍ನಲ್ಲಿ ನಡೆಯುವ ಚಾರಿತ್ರಿಕ ಶೃಂಗಸಭೆ ವಿಶ್ವಾದ್ಯಂತ ತೀವ್ರ ಕುತೂಹಲ ಕೆರಳಿಸಿದೆ.
ಇವರಿಬ್ಬರ ಮಾತುಕತೆ ಮತ್ತು ನಂತರದ ಫಲಶ್ರುತಿ ಬಗ್ಗೆ ಜಗತ್ತು ಕಾತುರದಿಂದ ನಿರೀಕ್ಷಿಸುತ್ತಿದೆ. ಇದೇ ವೇಳೆ ಸಭೆಗೆ ಕೊನೆ ನಿಮಿಷದ ಸಿದ್ದತೆಗಳು ನಡೆದಿವೆ. ಅಮೆರಿಕ ಮತ್ತು ಉತ್ತರ ಕೊರಿಯಾ ನಡುವಣ 65 ವರ್ಷಗಳ ಸುದೀರ್ಘ ಹಗೆತನದ ನಂತರ ಶಾಂತಿ ಪಯೊಂಗ್‍ಯಾಂಗ್ ಅಣ್ವಸ್ತ್ರ ನಿಶ್ಶಸ್ತ್ರೀಕರಣ ಮಾತುಕತೆಗೆ ಮುನ್ನುಡಿ ಬರೆಯುತ್ತಿರುವುದು ಮಹತ್ವದ ಬೆಳವಣಿಗೆಯಾಗಿದೆ. ಅಣ್ವಸ್ತ್ರಗಳನ್ನು ತ್ಯಜಿಸಬೇಕೆಂಬ ಟ್ರಂಪ್ ಬೇಡಿಕೆಗೆ ಕಿಮ್ ಕೊನೆಗೂ ಅದಕ್ಕೆ ಸಮ್ಮತಿಸಿದ್ದಾರೆ. ಒಟ್ಟಾರೆ ನಾಳೆಯ ಐತಿಹಾಸಿಕ ಶಾಂತಿ ಸ್ಥಾಪನೆ ಶೃಂಗಸಭೆ ಪ್ರಸ್ತುತ ಬಹು ಚರ್ಚಿತ ವಿಷಯ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ