ಚಾರ್ಮಾಡಿ ಘಾಟ್ ನಲ್ಲಿ ಗುಡ್ಡ ಕುಸಿತ ಸಂಚಾರ ಬಂದ್

Land slide caused due to heavy rainfalls at Charmadi Ghat blocking the Chikmagalore-Mangalore and Dharmasthala roadways on Sunday. --KPN

ಬೆಳ್ತಂಗಡಿ: ಭಾರಿ ಮಳೆಯಿಂದಾಗಿ ಚಾರ್ಮಾಡಿ ಘಾಟ್ ನಲ್ಲಿ ಮಣ್ಣು ಕುಸಿತವಾಗಿ ಕಳೆದ ನಾಲ್ಕು ಘಂಟೆಗಳಿಂದ  ಸಂಚಾರ ಅಸ್ತವ್ಯಸ್ಥವಾಗಿದೆ,

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್ ನಲ್ಲಿ ನಾಲ್ಕನೇ ಗುಡ್ದದಲ್ಲಿ ಭಾರಿ ಮಣ್ಣು ಕುಸಿದು ರಸ್ತೆಗೆ ಬಿದ್ದ ಪರಿಣಾಮವಾಗಿ ಸಂಚಾರ ಅಸ್ತವ್ಯಸ್ಥವಾಗಿದೆ ಇದರಿಂದ ಧರ್ಮಸ್ಥಳ ಹೊರನಾಡು ಶೃಂಗೇರಿ ಕಳಸ ದೇವಾಲಯಗಳಿಗೆ ತೆರಳುವ ಭಕ್ತರಿಗೆ ತೊಂದರೆಯುಂಟಾಗಿದೆ ಎಚ್ಚೆತ್ತು ಕೊಂಡ ಪೆÇಲೀಸರು ಎಸ್ ಕೆ ಬಾರ್ಡರ್ ಮತ್ತು ಕುದುರೆ ಮುಖ ಮೂಲಕ ಸಂಚಾರಿಸಲು ಬದಲಿ ರಸ್ತೆ ಮಾರ್ಗವನ್ನು ಮಾಡಿದ್ದಾರೆ ಮಂಗಳೂರಿಗೆ ತೆರಳುವ ವಾಹನಗಳಿಗೆ ಧರ್ಮಸ್ಥಳ ಹಾಗೂ ಉಜಿರೆ ಕೊಟ್ಟಿಗೆ ಹಾರದಲ್ಲಿ ಮಾರ್ಗ ಬದಲಾವಣೆ ಮಾಡಿದ್ದಾರೆ ಚಿಕ್ಕ ಮಗಳೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗುತ್ತಿರುವ ಕಾರಣ ಜಿಲ್ಲೆಯ ಎನ್ ಆರ್ ಪುರ ಮತ್ತು ಕೊಪ್ಪ ಎರಡು ತಾಲ್ಲೂಕುಗಳಲ್ಲಿನ ಎಲ್ಲಾ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಣೆ ಮಾಡಿದ್ದಾರೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ