ಶೆಹ್ಲಾ ರಷೀದ್ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನಿಡಿದ ಸಚಿವ ನಿತಿನ್ ಗಡ್ಕರಿ

ನವದೆಹಲಿ:ಜೂ-11; ಆರ್ ಎಸ್ಎಸ್ ಮತ್ತು ಕೇಂದ್ರ ಸಚಿವ ನಿತಿನ್​ ಗಡ್ಕರಿ ಅವರನ್ನು ನೋಡಿದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆಗೈಯಲು ಸಂಚು ರೂಪಿಸಿದಂತಿದೆ ಎಂದು ಶೆಹ್ಲಾ ರಷೀದ್ ಮಾಡಿರುವ ವಿವಾದಾತ್ಮಕ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಸಚಿವ ನಿತಿನ್ ಗಡ್ಕರಿ, ಶೆಹ್ಲಾ ರಷೀದ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

ಟ್ವಿಟರ್ ನಲ್ಲೆ ಎಚ್ಚರಿಕೆ ನೀಡಿರುವ ಗಡ್ಕರಿ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಹಕ್ಕುಗಳ ಕಾರ್ಯಕರ್ತೆ ಶೆಹ್ಲಾ ರಶೀದ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿಹೇಳಿದ್ದಾರೆ. ಮೋದಿ ಹತ್ಯೆ ವಿಚಾರದಲ್ಲಿ ಸಮಾಜದ ವಿರುದ್ಧ ವಿಲಕ್ಷಣ ಕಾಮೆಂಟ್​ ಮಾಡಿರುವವರ ವಿರುದ್ಧ ಕಾನೂನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.

ಶೆಹ್ಲಾ ತಮ್ಮ ಟ್ವೀಟರ್ ನಲ್ಲಿ ಆರ್ಎಸ್ಎಸ್ ಮತ್ತು ಗಡ್ಕರಿ ಅವರನ್ನು ನೋಡಿದರೆ ಮೋದಿ ಅವರನ್ನು ಕೊಲ್ಲಲು ಸಂಚು ರೂಪಿಸಿದವರಂತೆ ಕಾಣುತ್ತಾರೆ. ನಂತರ ಅದನ್ನು ಮುಸ್ಲಿಂ ಹಾಗೂ ಕಮ್ಯೂನಿಸ್ಟ್ ಗಳ ಮೇಲೆ ಹೊರಿಸಿ, ಬಳಿಕ ಮುಸ್ಲಿಂರನ್ನು ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲಿ ಗಲ್ಲಿಗೇರಿಸುವ ತಂತ್ರ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು.
Nitin Gadkari,PM Narendra Modi, Shehla Rashid, Twitter

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ