ಬಾದಾಮಿಯಲ್ಲಿ ನಾನು ಸ್ಪರ್ಧಿಸಬೇಕೇ ಬೇಡವೇ ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ: ಸಿಎಂ ಸಿದ್ದರಾಮಯ್ಯ

ಮೈಸೂರು:ಏ-19: ಬಾದಾಮಿಯಲ್ಲಿ ನಾನು ಸ್ಪರ್ಧಿಸಬೇಕೇ ಬೇಡವೇ ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ನಾನು ಹೈಕಮಾಂಡ್‌ ಅಲ್ಲ. ಈ ರಾಜ್ಯದ ಮುಖ್ಯಮಂತ್ರಿ ಅಷ್ಟೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನ‌ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಳು ಶಾಸಕರಿಗೆ ಟಿಕೆಟ್ ನಿರಾಕರಣೆ ವಿಚಾರ ಕುರಿತಂತೆ ಹೈಕಮಾಂಡ್ ಪರಿಶೀಲನೆ‌ ನಡೆಸುತ್ತದೆ. ಜಗಳೂರು ಕ್ಷೇತ್ರಕ್ಕೆ ರಾಜೇಶ್‌ಗೆ ಟಿಕೆಟ್ ಕೊಡಲು ನಿರ್ಧಾರವಾಗಿದ್ದು, ಉಳಿದ‌ ಶಾಸಕರ ವಿಚಾರವನ್ನು ರಾಹುಲ್ ಗಾಂಧಿ ತೀರ್ಮಾನಿಸುತ್ತಾರೆ. ಹೈಕಮಾಂಡ್ ‌ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ ಎಂದರು.

ಏಪ್ರಿಲ್ 24ರಿಂದ ರಾಜ್ಯ ಪ್ರವಾಸ ಆರಂಭಿಸುತ್ತೇನೆ ಎಂದ ಸಿಎಂ,ಈ ವರೆಗೆ ಎಲ್ಲೆಲ್ಲಿ ಹೋಗಿಲ್ಲವೋ ಅಂತಹ ಕಡೆಗಳಿಗೆ ಹೋಗುವೆ. ಎಲ್ಲಿ ಪ್ರಬಲ‌ ಸ್ಪರ್ಧೆ ಇದೆಯೋ ಅಲ್ಲಿಗೂ ಹೋಗುವೆ ಎಂದರು.

ಇನ್ನು ವರುಣಾ ಕ್ಷೇತ್ರದಲ್ಲಿ ಪುತ್ರ ಯತೀಂದ್ರ ಅವರ ಪರ ಸಿಎಂ ಸಿದ್ದರಾಮಯ್ಯ ಪ್ರಚಾರ ಮುಂದುವರೆಸಿದ್ದು, ಇಂದು ಮೆಲ್ಲಹಳ್ಳಿ, ಹುನಗನಹಳ್ಳಿ, ಮಾದೇಗೌಡನಹುಂಡಿ, ಪಟ್ಟೇಹುಂಡಿ, ರಂಗಸಮುದ್ರ, ಇಟ್ಟುವಳ್ಳಿ, ಕುಪ್ಯಾ, ತುಂಬಲ, ಮುತ್ತತ್ತಿ, ಆರ್.ಸಿ.ಹುಂಡಿ, ಯಡದೊರೆ, ಇಂಡವಾಳು, ಹೊಸಕೆಂಪಯ್ಯನಹುಂಡಿ, ಹಳೇ ಕೆಂಪಯ್ಯನಹುಂಡಿ, ಗರ್ಗೇಶ್ವರಿ, ಆಲಗೂಡು, ಹೆಳವರಹುಂಡಿ, ಭೈರಾಪುರ, ಹುಣಸೂರು, ಬಿಳಿಕೆರೆಹುಂಡಿ, ಮನ್ನೇಹುಂಡಿ, ಡಣಾಯಕನಪುರ ಸೇರಿದಂತೆ ಹಲವೆಡೆ ಪ್ರಚಾರ ನಡೆಸಿದರು.

Assembly election,CM Siddaramaiah,Badami suspense, still on

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ