ಶಿಕಾರಿಪುರದಲ್ಲೊಬ್ಬ ಹೆಣ್ಣು ಬಾಕ ! ಬೇಳೂರು ಸಿಡಿಸಿದ ಬಾಂಬ್…!

ಬೆಂಗಳೂರು,ಏ.19

ಸಾಗರ ಕ್ಷೇತ್ರದ ಬಿಜೆಪಿ ಟಿಕೆಟ್‌ ಕೈತಪ್ಪಿದ ಬಳಿಕ ಬಂಡಾಯವೆದ್ದಿರುವ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ  ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಹಲವರ ವಿರುದ್ದ ತೀವ್ರ ಕೆಂಡಕಾರಿದ್ದಾರೆ.

ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಗೋಪಾಲಕೃಷ್ಣ ಶಿಕಾರಿಪುರದಲ್ಲೊಬ್ಬ ಕಾಮುಕ, ಕಾಮುಕ ಅಲ್ಲ ಹೆಣ್ಣು ಬಾಕ ಇದ್ದಾನೆ. ಬಹುಶಃ ಅವನ ಸೀಡಿ ಹಾಲಪ್ಪನಿಗೆ ಸಿಕ್ಕಿರಬೇಕು. ಅದನ್ನು ಮುಂದಿಟ್ಟುಕೊಂಡು ಟಿಕೆಟ್‌ ಪಡೆದಿದ್ದಾನೆ ಎಂದರು.

ಹಾಲಪ್ಪ ಪಕ್ಷ ಬಿಟ್ಟು 3 ದಿನ ಅಡಗಿ ಕುಳಿತಿದ್ದ. ಆಗ ಇದೇ ಶೋಭಾ ಮೇಡಂ, ಭಾರತಿ ಶೆಟ್ಟಿ ಮತ್ತು ರಾಘವೇಂದ್ರ ಹೋಗಿ ವಾಪಸ್‌ ಕರೆ ತಂದಿದ್ದರು ಎಂದರು.

ನಾನು ಯಡಿಯೂರಪ್ಪ ಜೊತೆ ಕೆಜೆಪಿಗೆ ಹೋಗಲಿಲ್ಲ, ಹೀಗಾಗಿ ಟಿಕೆಟ್‌ ತಪ್ಪಿಸಿದ್ದಾರೆ. ನನಗೆ ಟಿಕೆಟ್‌ ತಪ್ಪಲು ಯಡಿಯೂರಪ್ಪ ಮನೆ ಮಗ ಮತ್ತು ಶೋಭಾ ಕರಂದ್ಲಾಜೆ ಅವರು ಕಾರಣ ಎಂದರು.

ನನಗೆ ಜೆಡಿಎಸ್‌ ಕದಿದೆ. ಮಾತುಕತೆಯೂ ನಡೆದಿದೆ. ಆದರೆ ನಾನು ಬಂಡಾಯ ಅಭ್ಯರ್ಥಿಯಾಗಿ  ಕಣಕ್ಕಿಳಿಯುವುದು ನಿಶ್ಚಿತ. ನನಗೆ ಹಾಲಪ್ಪ ಸೋಲಬೇಕು ಎಂದರು.

ಶೋಭಾ ಕರಂದ್ಲಾಜೆ ನಿವಾಸದ ಮೇಲೆ ಐಟಿ ದಾಳಿ ನಡೆಯಬೇಕು. ಕೋಟಿ ಕೋಟಿ ರೂಪಾಯಿ ಹಣ ಸಿಗುತ್ತದೆ’ ಎಂದು ಇದೇ ವೇಳೆ ಬಾಂಬ್‌ ಸಿಡಿಸಿದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ