ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಆಗಿದೆ: ಪ್ರಹ್ಲಾದ್ ಜೋಷಿ ಆರೋಪ

ಕೊಪ್ಪಳ:ಮಾ-24: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದು, ಕೊಲೆ ಭ್ರಷ್ಟಾಚಾರಗಲಲ್ಲಿ ನಂಬರ್ ಒನ್ ಆಗಿದೆ. ಇಂತಹ ಸರ್ಕಾರವನ್ನು ಕಿತ್ತೊಗೆಯಬೇಕಿದೆ ಎಂದು ಸಂಸದ ಪ್ರಹ್ಲಾದ್ ಜೋಷಿ ತಿಳಿಸಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಅವರು, ಆರ್. ಟಿ.ಓ.ಕಚೇರಿಯಿಂದ ಇಲೆಕ್ಷನ್  ಫಂಡ್ ಅಂತಾ ಹದಿನೈದು ಸಾವಿರ ಫಿಕ್ಸ್ ಮಾಡಿದ್ದಾರೆ. ಬೆಸ್ಕಾಂ,ಪಿ.ಡಬ್ಲ್ಯೂ,ಡಿ ಸೇರಿದಂತೆ ಎಲ್ಲಾ ಅಧಿಕಾರಿಗಳಿಗೆ ಹಣ ಕೊಡಬೇಕೆಂದು ಅನಧಿಕೃತ ಸುತ್ತೋಲೆ ಹೋಗಿದೆ. ರಾಜ್ಯದಲ್ಲಿ ಸರ್ಕಾರ ನಡೆಸುತ್ತಿರುವವರಿಂದ ಎಲ್ಲಾ ಕಛೇರಿಗಳಿಗೆ ಅಧಿಕೃತ ಸುತ್ತೊಲೇ ಹೋಗಿದೆ ಎಂದು ಗಂಭೀರ ಆರೋಪ ಮಾಡಿದರು.
ಆರ್.ಟಿ.ಓ.ಕಚೇರಿಯಲ್ಲಿನ ವಸೂಲಿ ದಂಧೆಯನ್ನು ಖಾಸಗಿ ಚಾನಲ್ ಬಯಲು ಮಾಡಿದೆ. ಇನ್ನು ಜಿಲ್ಲಾ ಪಂಚಾಯತ್ ಚುಣಾವಣೆಯಲ್ಲಿ ಚುಣಾವಣೆಗೆ ಹಣ ಬಳಕೆ ಬಗ್ಗೆ ಆರೋಪ ಕೇಳಿ ಬಂದಿತ್ತು. ಇನ್ನು ವಿಚಿತ್ರವೆಂದರೆ ಪೊಲೀಸ್ ಸ್ಟೇಷನ್ ಗಳನ್ನು ಸರ್ಕಾರ ಹರಾಜಿಗಿಟ್ಟಿದೆ. ಭ್ರಷ್ಟಾಚಾರಕ್ಕೆ ಮಣೆ ಹಾಕುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವನ್ನು ಕೊನೆಗಾಣಿಸಬೇಕಿದೆ ಎಂದರು.
bjp,koppala,prahlad joshi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ