ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯ ನಡೆಸಿದ ಪಾಪಿ ತಂದೆ

ಬೆಂಗಳೂರು:ಮಾ-4: ಮಗಳ ಮೇಲೆ ತಂದೆಯೇ ಲೈಂಗಿಕ ದೌರ್ಜನ್ಯ ನಡೆಸಿರುವ ಹೇಯ ಘಟನೆ ಬೆಂಗಳೂರಿನ ಕೇತನೂರು ಬಳಿ ನಡೆದಿದೆ. ತಂದೆಯ ಹೇಯ ಕೃತ್ಯದಿಂದ ತಪ್ಪಿಸಿಕೊಂಡ 12 ವರ್ಷದ ಬಾಲಕಿ ಪಕ್ಕದ ಮನೆಯವರ ನೆರವಿನಿಂದ ಪೊಲೀಸರಿಗೆ ದೂರು ನೀಡಿದ್ದಾಳೆ.

ತಂದೆಯ ನೀಚ ಕೃತ್ಯದಿಂದ ತಪ್ಪಿಸಿಕೊಂಡು ಬಂದ ಬಾಲಕಿ ಪಕ್ಕದ ಮನೆಯವರ ಬಳಿ ವಿಷಯ ತಿಳಿಸಿದ್ದಾರೆ. ತಕ್ಷಣ ಅವರ ಸಹಾಯದಿಂದ ಕೋತನೂರು ಪೊಲೀಸರಿಗೆ ದೂರು ನೀಡಿದ್ದಾಳೆ. ಆದರೆ ಆಗಲೇ ಪಾಪಿ ತಂದೆ ತಲೆಮರಿಸಿಕೊಂಡಿದ್ದಾನೆ.

ವೃತ್ತಿಯಲ್ಲಿ ಲೇಡಿಸ್ ಟೈಲರ್ ಆಗಿರುವ ಸಯೀದ್ ಇಸ್ಮಾಯಿಲ್ ಎಂಬಾತನೇ ಆರೋಪಿಯಾಗಿದ್ದು ಈತ ತನ್ನ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮಗಳ ಮೇಲೆಯೇ ವಿಕೃತಿ ಮೆರೆದಿದ್ದಾನೆ.

ಬಾಲಕಿ ಒಬ್ಬಳೇ ಮನೆಯಲ್ಲಿದ್ದಾಗ ಇಬ್ರಾಹಿಂ ಮಧ್ಯಾಹ್ನ ಊಟಕ್ಕೆ ಬಂದಿದ್ದ ವೇಳೆ ಮಗಳ ಜೊತೆ ಅಸಭ್ಯವಾಗಿ ವರ್ತಿಸಿ ಆಕೆಯ ಪ್ರೈವೇಟ್ ಪಾರ್ಟ್ಗಳನ್ನು ಮುಟ್ಟಿದ್ದಾನೆ. ತಂದೆಯ ಅಸಭ್ಯ ವರ್ತನೆಯಿಂದ ಭಯಗೊಂಡ ಬಾಲಕಿ ಪಕ್ಕದ ಮನೆಗೆ ಓಡಿಬಂದಿದ್ದಾಳೆ. ಬಾಲಕಿಯ ತಾಯಿ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಸಧ್ಯ ದೂರು ದಾಖಲಿಸಿಕೊಂಡಿರುವ ಕೋತನೂರು ಪೊಲೀಸರುಆರೋಪಿ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಇಬ್ರಾಹಿಂನನ್ನು ಹುಡುಕಲು ಜಾಲಬೀಸಿದ್ದಾರೆ.

Bangalore,12-year-old girl Molest, Tailor father

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ