ಗುಲಾಮಗಿರಿ ಪ್ರದರ್ಶಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾನ ಹರಾಜು ಹಾಕಿಕೊಂಡ ಕಾಂಗ್ರೆಸ್!

ಬೆಂಗಳೂರು: ಕಾಂಗ್ರೆಸ್ ರಾಜ್ಯಘಟಕ ಪೂಜೆಯ ವಿಚಾರದಲ್ಲೂ ತನ್ನ ಗುಲಾಮಗಿರಿ ಮನಸ್ಥಿತಿಯನ್ನು ಜಗತ್ತಿನೆದುರು ಹರಾಜು ಹಾಕಿಕೊಂಡಿದೆ. ಜೊತೆಯಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯುಂಟಾಗುವಂತೆ ವರ್ತಿಸಿರುವುದು ಸಾಮಾಜಿಕ ತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದರೆ, ಶಾಸಕಿ ಸೌಮ್ಯರೆಡ್ಡಿಯವರಿಗೆ ಹಬ್ಬ ಯಾವ ಧರ್ಮಕ್ಕೆ ಸೇರಿದ್ದೆನ್ನುವ ಗೊಂದಲ ಕಾಡಿರುವುದು ಬಹಿರಂಗವಾಗಿದೆ.
ನಾಡ ಹಬ್ಬ ದಸರಾ ಹಾಗೂ ವಿಜಯದಶಮಿ ಪ್ರಯುಕ್ತ ಪಕ್ಷದ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸೇರಿದಂತೆ ಹಲವು ನಾಯಕರು ಚಾಮುಂಡೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಆದರೆ ಅವರು ತಮ್ಮ ಪಕ್ಷದ ಅನಾಯಕಿ ಸೋನಿಯಾ ಗಾಂಯವರ ದೊಡ್ಡ ಗಾತ್ರದ ಭಾವಚಿತ್ರದ ಮುಂದೆ ಚಾಮುಂಡೇಶ್ವರಿ ದೇವಿಯ ಸಣ್ಣ ಫೆÇೀಟೋ ಇಟ್ಟು ಪೂಜಿಸಿರುವುದು ಹಿಂದೂಗಳ ಧಾರ್ಮಿಕ ಭಾವನೆಗೆ ಆಘಾತವುಂಟು ಮಾಡಿದೆ.
ಈ ಕುರಿತು ಸಾಮಾಜಿಕ ಹೋರಾಟಗಾರ, ಪ್ರಶಾಂತ್ ಸಂಬರಗಿ ಸಾಮಾಜಿಕ ಜಾಲತಾಣ ದಲ್ಲಿ, ನಿಮಗೆ ಸೋನಿಯಾ ಮೈನೋ ಬಗ್ಗೆ ಎಷ್ಟೇ ಗುಲಾಮಗಿರಿ ಇರಲಿ ನಿಮ್ಮಿಷ್ಟ. ಆದರೆ ನಮ್ಮ ದೇವರಿಗೆ ಈ ರೀತಿ ಅವಮಾನ ಮಾಡುವುದನ್ನು ನಾವು ಸಹಿಸುವುದಿಲ್ಲ. ಪದೇ ಪದೆ ನಮ್ಮ ಧಾರ್ಮಿಕ ಭಾವನೆಗಳನ್ನು ನೋಯಿಸುವ ಕೆಲಸ ಮಾಡುತ್ತಿರುವವರಿಗೆ ಕ್ಕಾರ. ನಿಮ್ಮ ಪಕ್ಷಕ್ಕೆ ಪದೇ ಪದೆ ಶಿಕ್ಷೆ ಆಗುತ್ತಿದ್ದರೂ ಇದೇ ಕೆಲಸ ಮುಂದುವರಿಸಿರುವ ನೀವು ಕ್ಷಮೆಗೆ ಅರ್ಹರಲ್ಲ ಎಂದು ತೀಕ್ಷ್ಣವಾಗಿ ಹೇಳಿಕೆ ನೀಡಿದ್ದಾರೆ. ದೇವಿಯ ಫೆÇೀಟೋಕ್ಕಿಂತ ನಿಮ್ಮ ಕಾಂಗ್ರೆಸ್ ಮಾತೆಯ ಫೆÇೀಟೋನೇ ದೊಡ್ಡದಿದೆ. ಭಕ್ತರಾದರೂ ಪರವಾಗಿಲ್ಲ, ಹೀಗೆ ಗುಲಾಮರಾಗಿರಬೇಡಿ ಎಂದು ತರಾಟೆ ತೆಗೆದುಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ